34.2 C
ಪುತ್ತೂರು, ಬೆಳ್ತಂಗಡಿ
March 19, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಪ್ರಾಪ್ತ ಬಾಲಕನಿಗೆ ಹಲ್ಲೆ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು- ಪ್ರಕರಣ ದಾಖಲು

ಬೆಳ್ತಂಗಡಿ : ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ಬಂದಿದ್ದ ಅನ್ಯ ಧರ್ಮದ ಅಪ್ರಾಪ್ತ ಬಾಲಕನಿಗೆ (17ವ) ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಬಾಲಕಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಬಾಲಕನ ತಂದೆ ಘಟನೆ ನಡೆದು ಏಳು ದಿನಗಳ ಬಳಿಕ ಮಾ.18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಾಲಕ ಮಾ.11 ರಂದು ಉಜಿರೆ ಜಾತ್ರೆಗೆ ಬಂದಿದ್ದು, ರಾತ್ರಿ 10.30 ರ ಸುಮಾರಿಗೆ ಜಾತ್ರೆಯಲ್ಲಿ ಜಾಯಿಂಟ್ ವೀಲ್‌ನ ಹತ್ತಿರ ಸಹಪಾಠಿ ವಿದ್ಯಾರ್ಥಿನಿಯರು ಮೊಬೈಲ್‌ನ್ನು ಆತನಲ್ಲಿ ಕೊಟ್ಟು ಅವರು ಆಟ ಆಡಲು ಹೋದಾಗ, ಅವರ ಬರುವಿಕೆಯನ್ನು ಕಾಯುತ್ತಿರುವ ಸಂದರ್ಭ ಅಲ್ಲಿಗೆ ಬಂದ ಕೆಲವರು ನಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಅಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿರುತ್ತಾರೆ ಹಾಗೂ ಸದ್ರಿ ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ.

ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿದ್ದಾನೆ ಎಂಬುದಾಗಿ ಬಾಲಕನ ತಂದೆ ಮಾ.18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 30/2026, ಕಲಂ: 137(2), 115(2), 351(2) , 352, 352(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಮುಗ್ಗ ಗುತ್ತು ಮನೆಯಲ್ಲಿ ವೈಭವದ ನವರಾತ್ರಿ ಪೂಜೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಬೆಳ್ತಂಗಡಿ ಸ.ಮಾ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ

Suddi Udaya

ಬಂದಾರು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

Suddi Udaya

ನೆರಿಯ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿ ಜೋನ್ಸಾನ್ ಗೆ ನ್ಯಾಯಾಂಗ ಬಂಧನ

Suddi Udaya

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಕುತ್ಲೂರು ನೇಸರ ಗುಂಪಿನ ಸದಸ್ಯ ಧರ್ಣಪ್ಪ ರವರಿಗೆ ಕ್ರಿಟಿಕಲ್ ಫಂಡ್ ವಿತರಣೆ

Suddi Udaya

ಕುಂದಾಪುರ : ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ: ಪಡಂಗಡಿ ನಡಿಬೆಟ್ಟು ನೇಮಿರಾಜ ಶೆಟ್ಟಿಯವರ ಮೊಮ್ಮಗ ಪ್ರದ್ಯೋತ್ ಮೃತ್ಯು

Suddi Udaya
error: Content is protected !!