25.1 C
ಪುತ್ತೂರು, ಬೆಳ್ತಂಗಡಿ
March 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ: ‘ಕೇರಿಂಜ ಯಾತ್ರೆ’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಕ್ಷೇತ್ರ ಬಳಂಜದ ಶ್ರೀ ಪಂಚಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2026ರ ಮಾರ್ಚ್ 19 ರಿಂದ ಮಾರ್ಚ್ 25ರ ವರೆಗೆ ವಾರ್ಷಿಕ ಜಾತ್ರೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಲಿದೆ.

ದೇಗುಲದ ಬ್ರಹ್ಮಕಲಶೋತ್ಸವವು ಶಾಸಕ ಹರೀಶ್ ಪೂಂಜರ ಅದ್ಯಕ್ಷತೆಯಲ್ಲಿ ನಡೆದು 12 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿ ಉತ್ಸವದ ಅಂಗವಾಗಿ ಮಾರ್ಚ್ 25ರಂದು ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯಲ್ಲಿರುವ ಐತಿಹಾಸಿಕ ಕೇರಿಂಜ ಬೆಟ್ಟಕ್ಕೆ ‘ಕೇರಿಂಜ ಯಾತ್ರೆ’ ಅಮ್ಮನ ಮೂಲ ಸ್ಥಾನದೆಡೆಗೆ ನಮ್ಮ ನಡಿಗೆ – ವಿಶೇಷ ಪಾದಯಾತ್ರೆ ಆಯೋಜಿಸಲಾಗಿದೆ

ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ಬೃಹತ್ ಸಂಕಲ್ಪ: 2014ರಲ್ಲಿ ನಡೆದ ಭವ್ಯ ಬ್ರಹ್ಮಕಲಶೋತ್ಸವದ ಯಶಸ್ಸಿನ ರೂವಾರಿ, ಕ್ಷೇತ್ರದ ಹೆಮ್ಮೆಯ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಈ ಬಾರಿಯ ಪಾದಯಾತ್ರೆ ನಡೆಯಲಿದೆ. ಮಾ.25ರಂದು ಪೂರ್ವಾಹ್ನ 9 ಗಂಟೆಗೆ ಶಾಸಕರು ಉದ್ಘಾಟಿಸಲಿದ್ದಾರೆ. ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಉಪಸ್ಥಿತಿ ವಹಿಸಲಿದ್ದಾರೆ.

ಕೈಲಾಸವಾಸಿ ಉಮಾಮಹೇಶ್ವರನ ಆವಾಸಸ್ಥಾನವಾದ ಕೇರಿಂಜ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಪ್ರಾರ್ಥನೆ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಳಂಜದ ಸಮಸ್ತ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಬಳಂಜ, ನಾಲ್ಕೂರು ಹಾಗೂ ತೆಂಕಕಾರಂದೂರು ಗ್ರಾಮದ ಸಮಸ್ತ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ ಎಂದು ಶ್ರೀ ಪಂಚಲಿಂಗೇಶ್ವರ ಭಕ್ತವೃಂದದ ಪರವಾಗಿ ಅಶ್ವಥ್ ಹೆಗ್ಡೆ ಬಳಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಚಾರ ಸಂಕಿರಣ ಮತ್ತು ವಿಜ್ಞಾನ ನಾಟಕ ಸ್ಪರ್ಧೆ

Suddi Udaya

ಆ.29ರಂದು ಮಹೇಶ್ ಶೆಟ್ಟಿ ತಿಮರೋಡಿ ದಂಪತಿ ಖುದ್ದು ಹಾಜರಾಗುವಂತೆ ಹೈ ಕೋರ್ಟ್ ಆದೇಶ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಭೀಕರ ಗಾಳಿ -ಮಳೆ: ಬೆಳ್ತಂಗಡಿ ಸೈಂಟ್ ತೆರೇಸಾ ಕಾನ್ವೆಂಟ್ ಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆ: ನೂತನ ಸಮಿತಿ ರಚನೆ

Suddi Udaya
error: Content is protected !!