34.2 C
ಪುತ್ತೂರು, ಬೆಳ್ತಂಗಡಿ
March 19, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಮಾ.21: ಇತಿಹಾಸ ಪ್ರಸಿದ್ದ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಜಿಲ್ಲೆಯ ಅತ್ಯಂತ ಪುರಾತನ ಕಂಬಗಳಲ್ಲಿ ವೇಣೂರು- ಪೆರ್ಮುಡ, ಸೂರ್ಯ-ಚಂದ್ರ ಜೋಡುಕರೆ ಕಂಬಳ ಕೂಡ ಒಂದು. ಹಾಗಾಗಿ ವೇಣೂರು ಕಂಬಳ ರಾಜ್ಯದ ಗಮನ ಸೆಳೆದ ಗ್ರಾಮೀಣ ಸೊಗಡಿನ ಕಂಬಳವಾಗಿದೆ. ಕೀರ್ತೀಶೇಷ ಮಾಜಿ ಶಾಸಕ ವಸಂತ ಬಂಗೇರರವರು ಕಳೆದ 31ವರ್ಷಗಳಿಂದ ಅತ್ಯಂತ ಶಿಸ್ತುಬದ್ದವಾಗಿ ಈ ಕಂಬಳವನ್ನು ನಡೆಸಿಕೊಂಡು ಬಂದಿದ್ದರು. 33ನೇ ವರ್ಷದ ಹೊನಲು ಬೆಳಕಿನ ಕಂಬಳವು ಮಾ.21ರಂದು ನಡೆಯಲಿದೆ ಎಂದು ವೇಣೂರು ಪೆರ್ಮುಡ ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಅವರು ಮಾ.18ರಂದು ವೇಣೂರು- ಪೆರ್ಮುಡ ಕಂಬಳದ ಬಗ್ಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಂಬಳವು ತುಳುನಾಡಿನ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ಇಲ್ಲಿನ ಜೀವನಾಡಿಯಾಗಿದೆ. ಗ್ರಾಮೀಣ ಬದುಕನ್ನು ಅನಾವರಣಗೊಳಿಸುವ ಸಂಪ್ರದಾಯವನ್ನು ಪ್ರೋತ್ಸಾಹಿಸಿದಾಗ ಮುಂದಿನ ಪೀಳಿಗೆಗೆ ಅವು ತಲುಪಲು ಸಾಧ್ಯವಿದೆ.ಈ ಬಾರಿಯ ಕಂಬಳವನ್ನು ಅತ್ಯಂತ ವಿಜೃಂಭಣೆಯಿAದ ನಡೆಸಲು ಸಮಿತಿಯು ನಿರ್ಧರಿಸಿದ್ದು ಈಗಾಗಲೇ ಪೂರ್ವ ತಯಾರಿ ಸಿದ್ದತೆಗಳು ನಡೆಯುತ್ತಿದೆ ಎಂದರು.

ಪ್ರಕೃತಿ ರಮಣೀಯವಾದ ಸುಂದರವಾದ ಪ್ರದೇಶದ ವೇಣೂರು ಪೆರ್ಮುಡ ಕಂಬಳದ ಕರೆ ಪಲ್ಗುಣಿ ನದಿ ದಡದಲ್ಲಿದೆ.ನೀರು, ನೆರಳು, ಕರೆ ಇಲ್ಲಿನ ವಿಶೇಷತೆಯಾಗಿದೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಈಗಾಗಲೇ ಸ್ಪರ್ಧೆಗೆ ಸುಮಾರು 130ಕ್ಕೂ ಹೆಚ್ಚು ಹೆಸರು ಬಂದಿದೆ.

ಕಂಬಳಾಭಿಮಾನಿಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.

ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ನೇರವೇರಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಪತ್ರಕರ್ತೆ, ಗ್ಯಾರಂಟಿ ನ್ಯೂಸ್ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ನೇರವೇರಿಸಲಿದ್ದಾರೆ. ಸಭಾಧ್ಯಕ್ಷರಾದ ಯು.ಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಸಚಿವರು, ಶಾಸಕರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು ಭಾಗಹಿಸಲಿದ್ದಾರೆ ಎಂದರು. ಈ ಕಂಬಳ ಕೂಟದಲ್ಲಿ ಊರ ಪರವೂರ ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೇಂದರು.

ಪತ್ರಿಕಾಗೋಷ್ಠಿಯಲ್ಲಿ ವೇಣೂರು- ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ಲ. ನಿತೀಶ್ ಎಚ್ ಕೋಟ್ಯಾನ್, ಪ್ರಧಾನ ಸಂಚಾಲಕ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ, ಕಾರ್ಯಾಧ್ಯಕ್ಷ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಗೋಪಾಲ್ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು ಉಪಸ್ಥಿತರಿದ್ದರು.

ಒಟ್ಟು 6 ವಿಭಾಗದಗಳಲ್ಲಿ ಸ್ಪರ್ದೆ- ಬಹುಮಾನಗಳು: ಕನೆ ಹಲಗೆ: ಪ್ರಥಮ ೧ ಪವನ್ (ಏಳೂವರೆ ಕೋಲು ನಿಶಾನಿಗೆ ನೀರು ಹಾಯಿಸಿದಲ್ಲಿ ಮಾತ್ರ) ದ್ವಿತೀಯ ಅರ್ಧ ಪವನ್ (ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸಿದಲ್ಲಿ), ಹಗ್ಗ ಹಿರಿಯ: ಪ್ರಥಮ 1 ಪವನ್: ದ್ವಿತೀಯ ಅರ್ಧ ಪವನ್, ಹಗ್ಗ ಕಿರಿಯ: ಪ್ರಥಮ ಅರ್ಧ ಪವನ್: ದ್ವಿತೀಯ ಕಾಲ್ ಪವನ್, ನೇಗಿಲು ಹಿರಿಯ: ಪ್ರಥಮ 1 ಪವನ್: ದ್ವಿತೀಯ ಅರ್ಧ ಪವನ್, ನೇಗಿಲು ಕಿರಿಯ: ಪ್ರಥಮ ಅರ್ಧ ಪವನ್ : ದ್ವಿತೀಯ ಕಾಲ್ ಪವನ್, ಅಡ್ಡ ಹಲಗೆ: ಪ್ರಥಮ 1 ಪವನ್ : ದ್ವಿತೀಯ ಅರ್ಧ ಪವನ್ ನೀಡಲಾಗುವುದು.

ಬೋಟಿಂಗ್- ಆಹಾರ ಮೇಳ: ಕಂಬಳದ ಯಶಸ್ವಿಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ವಿನೂತನ ಮತ್ತು ಹೊಸತನದೊಂದಿಗೆ ಕಂಬಳ ಆಯೋಜಿಸಲಾಗುತ್ತಿದ್ದು ವಿಶೇಷವಾಗಿ ಬೋಟಿಂಗ್, ಕಾಯ್ಕಿಂಗ್ ದೋಣಿ ವಿಹಾರ, ಬೆಳ್ತಂಗಡಿ ಟೂರಿಸಮ್ ಪ್ರಮೋಷನ್ ಗಾಗಿ ಗ್ಲೆಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಕ್ಷಣೆಗೆ ಗ್ಯಾಲರಿ ನಿರ್ಮಾಣ, ಗ್ರಾಮೀಣ ಸೊಗಡಿನ ವಸ್ತು ಪ್ರದರ್ಶನ, ಆಹಾರ ಮೇಳ ನಡೆಯಲಿದೆ. ರಕ್ಷಿತ್ ಶಿವರಾಂ, ಗೌರವಾಧ್ಯಕ್ಷರು ಕಂಬಳ ಸಮಿತಿ

ಹೊಸತನದೊಂದಿಗೆ ಕಂಬಳ: ನಿತೀಶ್ ಕೋಟ್ಯಾನ್
ಕಳೆದ ೩೨ ವರ್ಷಗಳಿಂದ ವ್ಯವಸ್ಥಿತÀವಾಗಿ ಹಲವು ವಿಶೇಷತೆಗಳೊಂದಿಗೆ ಯಶಸ್ಸು ಕಾಣುತ್ತಾ ಬಂದಿರುವ ವೇಣೂರು- ಪೆರ್ಮುಡ ಕಂಬಳವು ರಾಜ್ಯ ಮಟ್ಟದಲ್ಲೇ ಹೆಸರು ಸಾಧಿಸಿದೆ. ಕಂಬಳ ಕೂಟದಲ್ಲಿ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು ಹೊಸತನವನ್ನು ಸೇರಿಸಿಕೊಳ್ಳಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್ ಕೋಟ್ಯಾನ್ ತಿಳಿಸಿದರು.

ಕಣ್ಮರೆಯಾಗುತ್ತಿರುವ ವಸ್ತುಗಳ ಪ್ರದರ್ಶನ: ಪ್ರವೀಣ್ ಫೆರ್ನಾಂಡಿಸ್
ಬಳಕೆಯಲ್ಲಿ ಇಲ್ಲದ ಮತ್ತು ಕಣ್ಮರೆಯಾಗುತ್ತಿರುವ ದಿನಬಳಕೆ ವಸ್ತುಗಳನ್ನು ವೇಣೂರು ಪರ್ಮುಡ ಕಂಬಳ ಕೂಟದಲ್ಲಿ ಜೋಡಿಸಲಾಗಿದೆ. ಹಳೇ ಕಾಲದ ನಾಣ್ಯಗಳು, ಶಾವಿಗೆ ಒಳ್ಳು, ಮಸಾಲೆ ಮಣೆ, ಮಸಾಲೆ ಬಟ್ಟಲು, ಹಳೇ ವಸ್ತುಗಳು, ಸೇರು, ಅಚ್ಚೇರು, ಪಾವು, ಚಟಾಕು, ಸೋಲಗ, ಕೃಷಿಕರು ಉಪಯೋಗಿಸುತ್ತಿದ್ದ ಪರಿಕರಗಳನ್ನು ವಸ್ತು ಪ್ರದಶನದ ಮೂಲಕ ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನ ಮಕ್ಕಳಿಗೆ ಇದರ ಯಾವುದೇ ಪರಿಚಯವಿಲ್ಲದ ಮಕ್ಕಳಿಗೆ, ಯುವಕ- ಯುವತಿಯರಿಗೆ ತಿಳಿಸುವ ಒಂದು ಪ್ರಯತ್ನ ನಮ್ಮದಾಗಿದೆ ಎಂದು ಕಂಬಳ ಸಮಿತಿ ಪ್ರಧಾನ ಸಂಚಾಲಕ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ತಿಳಿಸಿದರು.

Related posts

ಕರಿಮಣೇಲು: ದೇಲಂಪುರಿ ಕ್ಷೇತ್ರದ ವಠಾರದಲ್ಲಿ ವಿವಿಧ ಬಗೆಯ ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ಹ್ಯಾಕರ್ ಗಳ ವಂಚನೆಗೆ ಸಿಲುಕಿ ರಿಯಾದ್ ಜೈಲಿನಲ್ಲಿರುವ ಚಂದ್ರಶೇಖರ್: ಚಂದ್ರಶೇಖರ್ ಬಿಡುಗಡೆಗೆ ಕ್ರಮ ಕೈಗೊಳ್ಳಲು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೇಂದ್ರ ಸರ್ಕಾರಕ್ಕೆ ಒತ್ತಾಯ

Suddi Udaya

ಶಿಬಾಜೆಯ ಮಾದರಿಯಲ್ಲಿ ಮರಣ ಮೃದಂಗಕ್ಕೆ ಅಣಿಯಾಗಿ ನಿಂತಿರುವ ಬೆಳ್ತಂಗಡಿ ಸಂತೆಕಟ್ಟೆ ವಿದ್ಯುತ್ ಕಂಬದ ಸ್ಟೇ ವಯ‌ರ್

Suddi Udaya

ಸಿಯೋನ್ ಆಶ್ರಮದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಕಕ್ಯಪದವು ಎಲ್‌ಸಿಆರ್ ವಿದ್ಯಾಸಂಸ್ಥೆ: ಕಾಲೇಜು ವಿಭಾಗದಲ್ಲಿ ವಾಣಿಜ್ಯ ಚಟುವಟಕೆ

Suddi Udaya

ಚೆಕ್ ಬೌನ್ಸ್ ಪ್ರಕರಣ: ನ್ಯಾಯಾಲಯಕ್ಕೆ ಐದು ವರ್ಷ ಹಾಜರಾಗದ ಆರೋಪಿಯ ಬಂಧನ

Suddi Udaya
error: Content is protected !!