38.4 C
ಪುತ್ತೂರು, ಬೆಳ್ತಂಗಡಿ
March 20, 2026
ಚಿತ್ರ ವರದಿಧಾರ್ಮಿಕವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ಹಿರಿಯ ನಾಗರಿಕರ ದಿನಾಚರಣೆ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವತಿಯಿಂದ ಮಾ. 19ರಂದು ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಿಶೇಷವಾಗಿ ಬಲಿಪೂಜೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಬಳಿಕ ಅವರಿಗೆ ಸನ್ಮಾನ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವು ಹಿರಿಯರನ್ನು ಸಂತೋಷಪಡಿಸಿತು. ನೆಲ್ಯಾಡಿ ಹಾಗೂ ಆರ್ಲ ಸೆಂಟ್ ಮೇರೀಸ್ ಚರ್ಚ್‌ನ ಸುಮಾರು ಐವತ್ತಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದರು.

ಪುಣ್ಯಕ್ಷೇತ್ರದ ಧರ್ಮಗುರು ರೆವ. ಫಾ. ಶಾಜಿ ಮಾತ್ಯು ಮಾತನಾಡಿ, “ಹಿರಿಯ ನಾಗರಿಕರ ಆರೈಕೆ ಸಮಾಜದ ಪ್ರಥಮ ಕರ್ತವ್ಯವಾಗಿದ್ದು, ಅವರ ಅನುಭವ ಮತ್ತು ಆಶೀರ್ವಾದಗಳು ನಮ್ಮ ಸಮಾಜದ ಅಮೂಲ್ಯ ಸಂಪತ್ತು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತೃಸಂಘದ ಸಿಸ್ಟರ್ ಲಿಸ್ ಮಾತ್ಯು, ಸಿಸ್ಟರ್ ತೆರೇಸಾ ಕುರ್ಯನ್, ಸುಜಾ ಜೇಮ್ಸ್, ಲಿಸಿ, ರಿಯಾ,ಸ್ಮಿತಾ, ಅನುಷಾ, ಮಿನಿ, ಸುಜಿತಾ, ಸೆನ್ಸಿ, ಸೀಮಾ ಹಾಗೂ ಪ್ರಾಂತ್ಯದ ಟ್ರೆಷರರ್ ಸಿಮಿ ಸೇರಿದಂತೆ ಹಲವರು ನೇತೃತ್ವ ನೀಡಿ ಸಹಕರಿಸಿದರು.

Related posts

ಮೇಲಂತಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಪಿಕಪ್ ಗೂಡ್ಸ್ ಟೆಂಪೋ

Suddi Udaya

ಭಾರತೀಯ ಲೆಕ್ಕ ಪರಿಶೋಧಕರ ಸಂಘದಿಂದ ಸಿಎ ಸಾಧಕಿ ನಿರೀಕ್ಷಾ ಎನ್.ನಾವರರಿಗೆ ಗೌರವಾರ್ಪಣೆ

Suddi Udaya

ಪೆರಿಂಜೆ ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಉಜಿರೆ: ಎಸ್ ಡಿ ಯಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ಸ್ಪರ್ಧೆಯಲ್ಲಿ 9 ವಿಭಾಗಗಳಲ್ಲಿ ಪ್ರಶಸ್ತಿ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಮಾಜಿ ರಾಷ್ಟ್ರ ಪತಿ ಮೊಮ್ಮಗ ಇಂದ್ರಜಿತ್ ಸಿಂಗ್ ಭೇಟಿ

Suddi Udaya
error: Content is protected !!