38.4 C
ಪುತ್ತೂರು, ಬೆಳ್ತಂಗಡಿ
March 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

ಬೆಳ್ತಂಗಡಿ; ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.

ಖುತುಬಾ ಪಾರಾಯಣ ಮತ್ತು ಪೆರ್ನಾಲ್ ನಮಾಝ್ ಗೆ ನೇತೃತ್ವವನ್ನು ಖತೀಬ್ ಉಸ್ತಾದ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ವಹಿಸಿದ್ದರು. ಸದರ್ ಉಸ್ತಾದ್ ತ್ವಾಹಿರ್ ಸ‌ಅದಿ ನಾವೂರು ಸಹಕಾರ ನೀಡಿದರು.

ಕಳೆದ 6 ತಿಂಗಳಿನಿಂದ ಕ್ರಮವಾಗಿ ಬೆಳಗ್ಗೆ ಮತ್ತು ಇಶಾಅ್ ನಮಾಝ್ ಗೆ ಆಗಮಿಸಿದ 9ನೇ ತರಗತಿ ವಿದ್ಯಾರ್ಥಿಗಳಾದ ಅಮಾನ್ ಮತ್ತು ಮುಹಮ್ಮದ್ ಶಾಝಿನ್ ಅವರಿಗೆ ವಿಶೇಷ ನಗದು ಪುರಸ್ಕಾರ ನೀಡಲಾಯಿತು.

ಎಲ್ಲಾ ದಿವಸಗಳಲ್ಲಿ ತರಾವೀಹ್ ನಮಾಝ್ ಗೆ ಆಗಮಿಸಿದ ಜಮಾಅತ್ ‌ನ ಹಿರಿಯರಾದ ಹಾಜಬ್ಬ ಸಿ, ಬಾವಾಕ ಬೆಳಾಲ್ ಮತ್ತು ಉಮರಬ್ಬ ಕನ್ಯಾಡಿ ಅವರನ್ನು ಶಾಲು ಹೊದಿಸಿ ನಗದಿನೊಂದಿಗೆ ಪುರಸ್ಕರಿಸಲಾಯಿತು. ಮದರಸ ವಿದ್ಯಾರ್ಥಿ ಮುಹಮ್ಮದ್ ಶುಜಾಹ್ ಅವರನ್ನೂ ನಗದಿನೊಂದಿಗೆ ಗುರುತಿಸಲಾಯಿತು.

ನಗದು ಬಹುಮಾನಗಳನ್ನು ಜಮಾಅತ್ ಅಧ್ಯಕ್ಷ, ಯುವ ಉದ್ಯಮಿ ಅಬ್ದುಲ್ ಬಶೀರ್ ನೆಕ್ಕರೆ ಪ್ರಾಯೋಜಿಸಿದರು.
ಕಾರ್ಯಕ್ರಮ ದಲ್ಲಿ ಕೆ.ಯು ಮುಹಮ್ಮದ್ ಸಖಾಫಿ, ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭ ಕೋರಿದರು.

ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಸಹಿತ ಜಮಾಅತ್ ಬಾಂಧವರು, ಕಮಿಟಿ‌ ಪದಾಧಿಕಾರಿಗಳು, ಎಸ್ ಬಿ ಎಸ್, ಎಸ್ ವೈ ಎಸ್ , ಎಸ್ಸೆಸ್ಸೆಫ್, ಕೆಎಂಜೆ ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಪ.ಜಾತಿ-ಪ.ಪಂಗಡದವರ ಹಿತರಕ್ಷಣಾ ಸಭೆ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮಗು ಸಾವು: ಸುಮೋಟೋ ಕೇಸು ದಾಖಲಿಸಲು ಆಗ್ರಹ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಬಕ್ರೀದ್ ಆಚರಣೆ

Suddi Udaya

ಉಜಿರೆಯಲ್ಲಿ ಫ್ಲೇಕ್ ಎನ್ ಪ್ಲೇಟ್ ಶುಭಾರಂಭ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರಿಂದ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ

Suddi Udaya

ಬೆಳ್ತಂಗಡಿ : ಮಾನಸಿಕ ಅಸ್ವಸ್ಥನನ್ನು ಸಿಯೋನ್ ಆಶ್ರಮಕ್ಕೆ ಸೇರಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya
error: Content is protected !!