March 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಸಾರ್ವಜನಿಕ ಸೇವೆಯಲ್ಲಿ ಸಾರ್ಥಕದ 52 ಸಂವತ್ಸರಗಳನ್ನು ಪೂರೈಸಿದ ಬೆಳ್ತಂಗಡಿ ಲಯನ್ಸ್ ಕ್ಲಬ್-ಮಾ.22: ಲಯನ್ಸ್ ಸೇವಾ ಭವನದ ಉದ್ಘಾಟನಾ ಸಮಾರಂಭ

ಬೆಳ್ತAಗಡಿ: 1974ರಲ್ಲಿ ಲಯನ್ ಬಿ.ಕೆ. ಸೂರ್ಯ ನಾರಾಯಣ ರಾವ್ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ “ಬೆಳ್ತಂಗಡಿ ಲಯನ್ಸ್ ಕ್ಲಬ್” ಸಾರ್ವಜನಿಕ ಸೇವೆಯಲ್ಲಿ ಸಾರ್ಥಕದ ೫೨ ಸಂವತ್ಸರಗಳನ್ನು ಕಂಡಿದೆ. ಅನೇಕ ಏಳು ಬೀಳುಗಳ ಮಧ್ಯೆ 2025- 26ರ ಚುಕ್ಕಾಣಿ ಹಿಡಿದಿರುವ ಲಯನ್ ಮುರಳಿ ಬಲಿಪರ ಅವಧಿಯಲ್ಲಿ ರೂ.1.20 ಕೋಟಿ ವೆಚ್ಚದ ನೂತನ “ಲಯನ್ಸ್ ಸೇವಾ ಭವನ”ದ ಉದ್ಘಾಟನಾ ಕಾರ್ಯಕ್ರಮ ಮಾ.22ರಂದು ಬೆಳಿಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಲಯನ್ಸ್ ಸೇವಾ ಕೇಂದ್ರ ಟ್ರಸ್ಟ್ ಅಧ್ಯಕ್ಷ ಲ| ಜಯಂತ ಶೆಟ್ಟಿ ಕುಂಟಿನಿ ಮತ್ತು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಲಯನ್ ರಾಜು ಶೆಟ್ಟಿ ಬೆಂಗತ್ಯಾರು ಇವರುಗಳ ಪರಿಶ್ರಮದ ಫಲವಾಗಿ, ನೂತನ ಸೇವಾ ಭವನದ ಕಲ್ಪನೆ ಸಾಕಾರಗೊಳ್ಳುತ್ತಿದೆ.
1993-94ರಲ್ಲಿ ಸರಕಾರದಿಂದ ೭ ಸೆಂಟ್ಸ್ ಜಾಗ ಮಂಜೂರಾಗಿದ್ದು ಸದ್ರಿ ನಿವೇಶನದಲ್ಲಿ 2005-06ರಲ್ಲಿ ಲ| ಬಿ.ಎಸ್. ಸುರೇಶರ ನೇತೃತ್ವದಲ್ಲಿ ಸೇವಾ ಸದನ ನಿರ್ಮಾಣಗೊಂಡಿತ್ತು. ಆದರೆ ಮೇಲಂತಸ್ತು ನಿರ್ಮಾಣದ ಸಾಮರ್ಥ್ಯ ಹೊಂದಿರದ ಮತ್ತು ಮಾದರಿ ಶಾಲೆಯ ಬಳಿ ಇರುವ ಲಯನ್ಸ್ ಭವನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರಣದಿಂದ ನೆಲಸಮವಾಗುವುದರಿಂದ ಹೊಸ ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು.

1976ರಿಂದ 13 ವರ್ಷಗಳ ಕಾಲ ಅಳದಂಗಡಿಯಲ್ಲಿ “ವೀರೇಂದ್ರ-ಸುರೇಂದ್ರ” ಕಂಬಳದ ಖ್ಯಾತಿ, ಬೆಳ್ತಂಗಡಿ ನಗರ ಪ್ರವೇಶ ಮತ್ತು ನಿರ್ಗಮನ ದ ಮಹಾಧ್ವಾರ ನಿರ್ಮಾಣ, ಕಿಲ್ಲೂರಿನಲ್ಲಿ ನೇತ್ರಾವತಿ ನದಿಗೆ ಕಾಲು ಸಂಕ ನಿರ್ಮಾಣ, ಸುಮಾರು 20 ಕಡೆಗಳಲ್ಲಿ ಪ್ರಯಾಣಿಕರ ತಂಗುದಾಣದ ವ್ಯವಸ್ಥೆ, ಶಾಲಾ ಕೊಠಡಿಗಳು – ರಂಗಮಂದಿರಗಳ ಕೊಡುಗೆ… ಹೀಗೆ ಬಹುಜನೋಪಯೋಗಿ ಸಮಾಜಮುಖಿ ಕೆಲಸ ಕಾರ್ಯಗಳಿಂದ ಜನ ಮನ್ನಣೆ ಪಡೆದ ಸಂಸ್ಥೆ ಲಯನ್ಸ್ ಕ್ಲಬ್ ಬೆಳ್ತಂಗಡಿ.

ಲಯನ್ಸ್ ಜಿಲ್ಲೆ 317ಆ ಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಕೀರ್ತಿಶೇಷ ಗಂಗಾಧರ ಶೇಖರ ಸ್ಮರಣೆ, ಸ್ಥಾಪಕ ಸದಸ್ಯರಾಗಿದ್ದ ದಿ. ಎಂ.ಜಿ. ಶೆಟ್ಟಿಯವರ ಸಮಯ ಪ್ರಜ್ಞೆ, ವಿ.ಆರ್. ನಾಯಕ್, ಪ್ರಕಾಶ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ, ರಾಜು ಶೆಟ್ಟಿ ಬೆಂಗತ್ಯಾರು, ಧರಣೇಂದ್ರ ಕೆ ಜೈನ್ ಮತ್ತು ವಸಂತ ಶೆಟ್ಟಿ ಶ್ರದ್ಧಾ ಮುಂತಾದ ಪ್ರಾಂತ್ಯಧ್ಯಕ್ಷರುಗಳ ಶಾಶ್ವತ ಕಾಮಗಾರಿಗಳು, ಸತತ ಮೂರು ಬಾರಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಆಚಾರ್ಯ ಉಜಿರೆಯವರ “ಪ್ರಾಂತೀಯ ಸಮ್ಮೇಳನ”ಗಳ ಜನಾಕರ್ಷಣೆ, ೨೦೧೬ರಲ್ಲಿ ಎನ್.ಎ. ಗೋಪಾಲ ಶೆಟ್ಟಿ, ೨೦೨೪ರಲ್ಲಿ ಉಮೇಶ ಶೆಟ್ಟಿ ಮತ್ತು ೨೦೨೫ರಲ್ಲಿ ದೇವದಾಸ ಶೆಟ್ಟಿ ಹಿಬರೋಡಿ ಯವರ ಸಾರಥ್ಯದಲ್ಲಿ “ಲಯನ್ಸ್ ಜಿಲ್ಲೆಯ ಪ್ರಥಮ ಸ್ಥಾನ” ಗಳಿಕೆಯ ಕೀರ್ತಿ ಬೆಳ್ತಂಗಡಿಯ ಹಿರಿಮೆ ಗರಿಮೆ ಹೆಚ್ಚಿಸಿದೆ. ತಾಲೂಕಿನ ಉದ್ದಗಲಕ್ಕೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಮಾಡಲು ಲಯನ್ಸ್ ಸದಸ್ಯರು ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಪ್ರತೀ ವರ್ಷ ಮುಡಿಪಾಗಿಟ್ಟು ನಿರಂತರ ಸೇವೆ ಮಾಡುತ್ತಾ ಬರುತ್ತಿರುವುದು ಶ್ಲಾಘನೆಯ ಕೆಲಸವಾಗಿದೆ.

ಸಂಚಾಲಕರಾದ ಲ| ರಘುರಾಮ ಶೆಟ್ಟಿ ಸಾಧನಾ ರವರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ನೂತನ ಲಯನ್ಸ್ ಸೇವಾ ಭವನವನ್ನು ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 200 ಆಸನ ವ್ಯವಸ್ಥೆಯ “ಕಾಶಿ ಶೆಟ್ಟಿ ಸಭಾಂಗಣ”, ಭೋಜನಾಲಯ ಸಣ್ಣ ಕಾರ್ಯಕ್ರಮಗಳಿಗೆ ಕಡಿಮೆ ಬಾಡಿಗೆಗೆ ಲಭ್ಯವಾಗುತ್ತದೆ. ಒಟ್ಟು 7ಕೊಠಡಿಗಳನ್ನು ಬಾಡಿಗೆಗೆ ನೀಡಿ ಕನಿಷ್ಠ ಮಾಸಿಕ ರೂ 50000 ಆದಾಯ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಕೆಲವೇ ಕೆಲವು ಕೊಡುಗೈ ದಾನಿಗಳು ಮತ್ತು ಲಯನ್ಸ್-ಲಿಯೋ ಸದಸ್ಯರೇ ಸೇರಿ ಆರ್ಥಿಕ ನೆರವು ನೀಡಿ ನಿರ್ಮಾಣಗೊಂಡ “ಲಯನ್ಸ್ ಸೇವಾ ಭವನ” ಬೆಳ್ತಂಗಡಿಯ ಕೇಂದ್ರಭಾಗ ತಾಲೂಕು ಕಛೇರಿಯಿಂದ ಕಣ್ಣಳತೆಯ ದೂರದಲ್ಲಿರುವುದರಿಂದ ಎಲ್ಲರಿಗೂ ಪ್ರಯೋಜನಕಾರಿಯಾಗಲಿದೆ.

ಉದ್ಘಾಟನಾ ಸಮಾರಂಭ:
ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗ ಕ್ಯಾಂಪ್ಕೊ ರಸ್ತೆ ಬದಿ ನಿರ್ಮಾಣಗೊಂಡ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಲಯನ್ಸ್ ಸೇವಾ ಭವನದ ಉದ್ಘಾಟನಾ ಸಮಾರಂಭ ಮಾ.೨೨ರಂದು ನಡೆಯಲಿದೆ. ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಬರೋಡಾ ಉದ್ಘಾಟಿಸಲಿರುವರು. ಶಾಸಕ ಹರೀಶ್ ಪೂಂಜ ಭೋಜನ ಗೃಹ ಉದ್ಘಾಟಿಸುವರು, ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಾಜ್ಯಪಾಲ ಲ| ಕುಡ್ಪಿ ಅರವಿಂದ ಶೆಣೈ ಲಯನ್ಸ್ ಕಛೇರಿ ಉದ್ಘಾಟಿಸುವರು. ಬೆಳ್ತಂಗಡಿ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಲ| ಜಯಂತ ಶೆಟ್ಟಿ ಕುಂಟಿನಿ ಸಭಾಧ್ಯಕ್ಷತೆ ವಹಿಸುವರು. ಮಂಗಳೂರು ಮೆಸ್ಕಾಂ ನಿಗಮ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಂಗಳೂರು ಸುಜನ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಸ್ಥಾಪಕ ಕಾರ್ಯದರ್ಶಿ ಲೋಕೇಶ್ ಆರ್, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಪ್ರಶಾಂತ್ ಬಿ.ಕೆ., ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಲ| ತಾರಾನಾಥ ಕೆ, ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಲ| ಗೋವರ್ಧನ ಕೆ. ಶೆಟ್ಟಿ ಹಾಗೂ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಇದರ ಅಂಗವಾಗಿರುವ ಲಯನ್ಸ್ ಸೇವಾ ಕೇಂದ್ರ ಟ್ರಸ್ಟ್ ಇದರಿಂದ ನಿರ್ವಹಿಸಲ್ಪಡುತ್ತಿದ್ದ ಹಿಂದಿನ ಕಟ್ಟಡ ಶಿಥಿಲಾವಸ್ಥೆ ತಲುಪಿದರಿಂದ ಇದರ ಪುನರ್ ನಿರ್ಮಾಣಕ್ಕೆ 2024ರಲ್ಲಿ ಟ್ರಸ್ಟ್ ಅಧ್ಯಕ್ಷ ಲ| ಎಂ.ಜಿ ಶೆಟ್ಟಿ ರವರ ಗೌರವ ಅಧ್ಯಕ್ಷತೆಯಲ್ಲಿ ಲಯನ್ ರಾಜು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸ ಉತ್ತಮ ರೀತಿಯಲ್ಲಿ ಮುನ್ನಡೆಯುವ ಸಂದರ್ಭದಲ್ಲಿ ಲಯನ್ ಎಂ.ಜಿ. ಶೆಟ್ಟಿ ನಿಧನದ ಬಳಿಕ ಟ್ರಸ್ಟ್ ಅಧ್ಯಕ್ಷರಾಗಿ ಕೆಲಸ ಮಾಡುವ ಭಾಗ್ಯ ನನ್ನ ಪಾಲಿಗೆ ಬಂದಿದೆ. ಇದೀಗ ಸರ್ವರ ಸಹಕಾರದಿಂದ ಭವ್ಯವಾಗಿ, ಸುಸಚ್ಚಿತವಾದ ಲಯನ್ಸ್ ಭವನ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳು -ಲ| ಜಯಂತ ಶೆಟ್ಟಿ ಕೆ. ಅಧ್ಯಕ್ಷರು ಲಯನ್ಸ್ ಸೇವಾ ಕೇಂದ್ರ ಟ್ರಸ್ಟ್ ರಿ.

93-94ರಲ್ಲಿ ಸರಕಾರದಿಂದ ೭ಸೆಂಟ್ಸ್ ಜಾಗ ಮಂಜೂರಾಗಿದ್ದು. ಸದ್ರಿ ಸ್ಥಳದಲ್ಲಿ ೨೦೦೪-೨೦೦೫ರಲ್ಲಿ ಆಗಿನ ಬಿ.ಎಸ್ ಸುರೇಶ ರವರ ಅಧ್ಯಕ್ಷತೆಯಲ್ಲಿ ಹಿಂದಿನ ಕಟ್ಟಡ ನಿರ್ಮಾಣವಾಗಿದ್ದ ಕಾರಣ ಸದ್ರಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು. 2024ರಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ೫೦ನೇ ವರ್ಷದ ಅವಧಿಯಲ್ಲಿ ಸದ್ರಿ ಸಮಿತಿ ರಚಿಸಿದ್ದು, ಇದೀಗ ಹೊಸ ಕಟ್ಟಡ ನಿರ್ಮಾಣ ಮಾಡಿದ್ದು ಸುಮಾರು 4500 ಚದರ ಅಡಿ ಕಟ್ಟಡವನ್ನು ಸುಸಜ್ಜಿತವಾಗಿ ಸುಮಾರು 1 ಕೋಟಿ 20 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡು ಸದ್ರಿ ಕಟ್ಟಡವು ಮಾ.22ರಂದು ಲೋಕಾರ್ಪಣಗೊಳ್ಳಲಿದೆ. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ನಾವು ಅಭಾರಿಯಾಗಿದ್ದೇವೆ -ಲ| ರಾಜು ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕಟ್ಟಡ ನಿರ್ಮಾಣ ಸಮಿತಿ

1974ರಲ್ಲಿ ಲಯನ್ಸ್ ಕ್ಲಬ್ ಸ್ಥಾಪನೆಗೊಂಡು ಸಾರ್ಥಕ ಸೇವೆಯೊಂದಿಗೆ 52 ವರ್ಷಗಳನ್ನು ಪೂರೈಸಿದೆ. ಗೃಹ ನಿರ್ಮಾಣಕ್ಕೆ, ವೈದ್ಯಕೀಯ, ಶಾಲೆಗಳಿಗೆ ನೆರವು ನೀಡುತ್ತಿದ್ದೇವೆ. ಪ್ರಯಾಣಿಕ ತಂಗುದಾಣ ಮುಂತಾದ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ ಲಯನ್ಸ್ ಸಂಸ್ಥೆಗೆ ಸ್ವಂತ ಮನೆ ಇರಲಿಲ್ಲ. ಇದೀಗ ಸ್ವಂತ ಮನೆ ನಿರ್ಮಾಣವಾಗಿರುವುದು ಖುಷಿ ತಂದಿದೆ.-ಲ| ಮುರಳಿ ಬಲಿಪ ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ

Related posts

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಕೊಕ್ಕಡ: ಕೊಡಿಂಗೇರಿ ಸೇತುವೆ ಸಹಿತ ಕಿಂಡಿ ಅಣೆಕಟ್ಟುವಿನ ಉದ್ಘಾಟನೆ

Suddi Udaya

ನಾರಾವಿ ಸಂತ ಅಂತೋಣಿ ಪ.ಪೂ ಕಾಲೇಜು ಶೇ.98 ಫಲಿತಾಂಶ

Suddi Udaya

ಕರ್ನಾಟಕ ರಾಜ್ಯ ಟೈಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ಆಟಿಡೊಂಜಿ ದಿನ

Suddi Udaya

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya

ಕೊಕ್ಕಡ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಅಶಕ್ತರಿಗೆ ನೆರವು

Suddi Udaya
error: Content is protected !!