September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಿಯೋನ್ ಆಶ್ರಮದಲ್ಲಿ ವಾರ್ಷಿಕೋತ್ಸವ ಆಚರಣೆ

ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ 27ನೇ ವಾರ್ಷಿಕೋತ್ಸವವನ್ನುಮಾ.22ರಂದು ಆಚರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ.ಯವರು ನೆರವೇರಿಸಿದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಸಿ.ಪೌಲೋಸ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ್ ಪ್ರಭು ಮಾತನಾಡಿ ಸಿಯೋನ್ ಆಶ್ರಮದ ಕುರಿತು ತಾವೇ ರಚಿಸಿದ ಸುಂದರವಾದ ಕವಿತೆಯನ್ನು ಹಾಡಿ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ತಿಳಿಸಿ, ಅಶ್ರಮದ ಸೇವೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ವೈದ್ಯಾಧಿಕಾರಿ ಡಾ.ಶಿವಾನಂದ ಸ್ವಾಮಿಯವರು ಸಂಸ್ಥೆಯು ಬೆಳೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿ. ಪ್ರಸ್ತುತ ಕಾರ್ಯವೈಖರಿಗಳ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ., ವೈದ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಹಿತೈಷಿಗಳಾದ ಜೋಸೆಫ್ ಪಿ.ಪಿ., ಆಶ್ರಮದ ಫಲಾನುಭವಿಗಳಾದ ಶಶಿಧರ ಮತ್ತು ಐಶ್ವರ್ಯ ಉಪಸ್ಥಿತರಿದ್ದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು ಮತ್ತು ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.

ಸಂಸ್ಥೆಯ ಲೆಕ್ಕಾಧಿಕಾರಿ ಸೌಮ್ಯ ಯು.ಪಿ.ಯವರು ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಶೋಭಾ ಯು.ಪಿ. ಸ್ವಾಗತಿಸಿ, ಸಿಬ್ಬಂದಿ ಆಶಾ ಸುಧಾಕರ್ ವಂದಿಸಿದರು. ಸಿಬ್ಬಂದಿ ದಿನಾವತಿ ಕಾರ್ಯಕ್ರಮ ನಿರೂಪಿಸಿದರು.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿಧ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ: 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡು ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್

Suddi Udaya

ಫೆ. 26ರಿಂದ ಮಾ.4: ಬೆಳಾಲು ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya

ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಕೆಸರ್‌ದ ಕಂಡೊಡೊಂಜಿ ದಿನ’: ತುಳುನಾಡಿನ ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ: ಅನಿಲ್ ಕುಮಾರ್:

Suddi Udaya

ಗುರುವಾಯನಕೆರೆ : ಶಕ್ತಿ ನಗರದಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ

Suddi Udaya
error: Content is protected !!