ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ “ ಕಲೆಗಳ ದೃಷ್ಟಿಕೋನದಿಂದ ಶಿಕ್ಷಣದ ವ್ಯಾಖ್ಯಾನ” ಉಪನ್ಯಾಸಮಾಲಿಕೆ


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ವಿದ್ಯಾ ಭಾರತಿ ಉಚ್ಚ ಶಿಕ್ಷಾ ಸಂಸ್ಥಾನ ಕರ್ನಾಟಕ ಮತ್ತು ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತ್ ಬೋಧ್ ಮಾಲಾ ಉಪನ್ಯಾಸ ಮಾಲಿಕೆಯಲ್ಲಿ “ ಕಲೆಗಳ ದೃಷ್ಟಿಕೋನದಿಂದ ಶಿಕ್ಷಣದ ವ್ಯಾಖ್ಯಾನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರು ಸಂಗೀತ ಮತ್ತು ನೃತ್ಯ, ಪರಿಸರದಿಂದ ಸಿಕ್ಕಿರುವಂತಹದು. ಪ್ರತಿಯೊಂದು ಧ್ವನಿಯೂ ಕಲಾವಿದನಿಗೆ ಸಂಗೀತದಂತೆ ಕಾಣುತ್ತದೆ. ಮರಗಳು ಮತ್ತು ನದಿಗಳ ಚಲನೆ ಕಲಾವಿದನಿಗೆ ನೃತ್ಯವಾಗಿ ಕಾಣುವುದರೊಂದಿಗೆ ಏಕಾಗ್ರತೆ ಲಭಿಸುತ್ತದೆ ಹಾಗು ನವರಸಗಳು, ನೃತ್ಯ, ಸಂಗೀತ ಮತ್ತು ಸಂಭಾಷಣೆಯ ಏರಿಳಿತದ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ ಸಲ್ಡಾನ ರವರು ವಹಿಸಿ ಭಾಷೆ ಕಲಿಕೆಯಿಂದಾಗಿ ನಟನೆ ಮರೆಯುತ್ತೇವೆ. ಸಂಗೀತ, ನೃತ್ಯ, ಶಿಕ್ಷಕರ ಬೋಧನೆಗೆ ಸಹಾಯಕ. ಶಿಕ್ಷಕರಿಗೆ ನವರಸಗಳ ಬಗ್ಗೆ ಅರಿವಿದ್ದಾಗ ಉತ್ತಮ ಗುರುವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ವಿದುಷಿ ಮಂಜುಳ ಸುಬ್ರಹ್ಮಣ್ಯರ ಶಿಷ್ಯೆಯಾದ ಕುಮಾರಿ ಅವನಿ ಬೆಳ್ಳಾರೆ ಹಾಗೂ ಕಾಲೇಜಿನ ಉಪನ್ಯಾಸಕರು, ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಪೂಜಶ್ರೀ ಅತಿಥಿ ಪರಿಚಯ ಮಾಡಿ, ಶ್ವೇತಾ ಎಂ ಎಸ್ ಸ್ವಾಗತಿಸಿ, ಹರ್ಷಿತಾ ವಂದಿಸಿ, ಶ್ರವಣ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಕರಾಟೆ ಸ್ಪರ್ಧೆ: ಸಾನ್ವಿ ಎಸ್ ಕೋಟ್ಯಾನ್ ಬಳಂಜ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಹ್ಯಾಂಡ್ ಬಾಲ್ ಪಂದ್ಯಾಟ: ಸಂತ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ, ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ತಣ್ಣೀರುಪಂತ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರುಪೂಜೆ, ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಮಂಗಳೂರು ಆದರ್ಶ್ ಫ್ರೆಂಡ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ಕಾಪಿನಡ್ಕ ರವಿ ಪೂಜಾರಿ ಚಿಲಿಂಬಿ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya
error: Content is protected !!