September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಅಂಡಿಂಜೆ ನಿವಾಸಿ ಪ್ರಶಾಂತ್ ಆಚಾರ್ಯ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಅಂಡಿಂಜೆ ನಿವಾಸಿ ಪ್ರಶಾಂತ್ ಆಚಾರ್ಯ (43ವ) ಮಾ.23ರಂದು ಮೂಡುಬಿದಿರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು. ಕಳೆದ 22 ವರ್ಷಗಳಿಂದ ಮೂಡುಬಿದಿರೆಯ ಎಂ.ಕೆ. ಜ್ಯುವೆಲ್ಲರಿಯಲ್ಲಿ ಚಿನ್ನದ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.23ರಂದು ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬಳಿಕ ತಾವು ಕೆಲಸ ಮಾಡುತ್ತಿದ್ದ ವರ್ಕ್‌ಶಾಪ್ ಸಮೀಪದಲ್ಲಿರುವ ಮತ್ತೊಂದು ಚಿನ್ನದ ಅಂಗಡಿಗೆ ತೆರಳಿದ್ದಾಗ ಅಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದ ಅವರು ಮೃತಪಟ್ಟಿದ್ದಾರೆ.

ಮೃತರು ತಾಯಿ, ಪತ್ನಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಉಜಿರೆ: ಅಭ್ಯಾಸ್ ಪಿ .ಯು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯ ಆಚರಣೆ

Suddi Udaya

ಮಾ.10: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಮುಂಗಾರು ಮಳೆಯ ಪೂರ್ವ ಸಿದ್ಧತೆ ಬಗ್ಗೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ-ಸಮಾಲೋಚನಾ ಸಭೆ

Suddi Udaya

ಕೊಕ್ಕಡದ ರಿತ್ವಿಕಾ ನವೋದಯ ವಿದ್ಯಾಲಯಕ್ಕೆ ಆಯ್ಕೆ

Suddi Udaya

ಕೊರಂಜ ಸ.ಉ.ಪ್ರಾ. ಶಾಲಾ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ವಿತರಣೆ

Suddi Udaya

ತಣ್ಣೀರುಪಂತ ಸುಗಮ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya
error: Content is protected !!