September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯ ಖಾಸಗಿ ವಿಡಿಯೋವನ್ನು ಪಡೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ ಬಗ್ಗೆ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿಯ ಖಾಸಗಿ ಉದ್ಯೋಗಿಯಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಸುಶಾಂತ ಪೂಜಾರಿ ಎಂಬ ಯುವಕ ಪರಿಚಯವಾಗಿದ್ದು ಇವರಿಬ್ಬರು ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ಪರಸ್ಪರ ಪ್ರೀತಿಸಿತ್ತಿದ್ದರು. ಈ ಸಂದರ್ಭದಲ್ಲಿ ಆತ ಯುವತಿಯ ಖಾಸಗಿ ವಿಡಿಯೋ ನೀಡುವಂತೆ ನಿರಂತರ ಪೀಡಿಸುತ್ತಿದ್ದ ಒಮ್ಮೆ ಸ್ನಾನ ಮಾಡುವ ವೇಳೆ ಆಕೆ ಆತನಿಗೆ ವಿಡಿಯೋ ಕಾಲ್ ಮಾಡಿದ್ದು ಆತ ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು ಇದಾದ ಬಳಿಕ ಈ ವಿಡಿಯೋವನ್ನು ಸಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ ಇದಕ್ಕೆ ಈತನ ಸಹೋದರಿಯೂ ಸಹಕಾರ ನೀಡಿದ್ದಾಳೆ ಎಂದು ನೊಂದ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಸಿ & ಎಸ್.ಟಿ ಕಾಯ್ದೆಯ ಅಡಿಯಲ್ಲಿ ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಮಾ.24 ರಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿರುವ ಮರವನ್ನು ಸರಿಸಿ ದಾರಿಯನ್ನು ಸರಿಪಡಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ರಕ್ತದಾನ ಶಿಬಿರ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್

Suddi Udaya

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

Suddi Udaya
error: Content is protected !!