September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌: ಎಸ್.ಡಿ.ಎಂ ಮನ್ವಿತ್ ರೈಗೆ ಕಂಚಿನ ಪದಕ

ಉಜಿರೆ: ಇತ್ತೀಚೆಗೆ ಓಡಿಶಾದ ಭುವನೇಶ್ವರದಲ್ಲಿ ಮಾರ್ಚ್ 15ರಿಂದ 20ರವರೆಗೆ ನಡೆದ ಪುರುಷರ ಮತ್ತು ಮಹಿಳೆಯರ 26ನೇ ಯುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಹಾಗೂ ಎಸ್.ಡಿ.ಎಂ ಕ್ರೀಡಾ ಸಂಘದ ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿ ಮನ್ವಿತ್ ರೈ ಸಕ್ರೀಯವಾಗಿ ಭಾಗವಹಿಸಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ರಾಜ್ಯದಿಂದ ಒಡಿಶಾ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕಾಸರಗೋಡಿನ ನೆಟ್ಟಣಿಗೆ ಮೂಲದ ಶ್ಯಾಮ್ ಪ್ರಸಾದ್ ರೈ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ಮನ್ವಿತ್ ರೈ, ಕಳೆದ ಬಾರಿ ಆಂಧ್ರಪ್ರದೇಶದ ಕಾಯ್ಕಿನಾಡದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಪುರುಷ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿದಿಸಿದ್ದರು. ಈ ಹಿಂದೆ ಕೇರಳದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಪುರುಷ ವಾಲಿಬಾಲ್ ಪಂದ್ಯಾವಳಿಯಲ್ಲೂ ಸಕ್ರೀಯವಾಗಿ ಭಾಗವಹಿಸಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿದಿಸಿದ್ದರು.

ಇವರಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪುಜಾರಿ ತರಬೇತಿ ನೀಡಿರುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮೆರೆದಿರುವ ವಿದ್ಯಾರ್ಥಿ ಮನ್ವಿತ್ ರೈ ಗೆ, ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಬಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾರದಾ, ಸುದೀನ್ ಪೂಜಾರಿ, ಸಂದೇಶ್ ಬಿ ಪೂಂಜ, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Related posts

ಧರ್ಮಸ್ಥಳ: ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಉದ್ಘಾಟನೆ

Suddi Udaya

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Suddi Udaya

ಚೆಸ್ ಪಂದ್ಯಾಟದಲ್ಲಿ ಉಜಿರೆಯ ನ್ಯಾಚುರೋಪತಿ ಕಾಲೇಜಿಗೆ ಪ್ರಶಸ್ತಿ

Suddi Udaya

ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಆಂ.ಮಾ. ಶಾಲೆಯ ಸ್ಕೌಟ್ ಮಾಸ್ಟರ್ ಚಿದಾನಂದ್

Suddi Udaya

ಕಳಿಯ ವೈಷ್ಣವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಮಹಾ ರಥೋತ್ಸವ

Suddi Udaya
error: Content is protected !!