September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಶ್ರೀಗಂಧ ಕಳವು ಪ್ರಕರಣ: 27 ವರ್ಷಗಳಿಂದ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಂಜೇಶ್ವರ ವರ್ಕಾಡಿಯ ಎಸ್.ಎ ಅಶ್ರಪ್ ಕೇರಳದಲ್ಲಿ ವಶ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

ಬೆಳ್ತಂಗಡಿ: ಶ್ರೀಗಂಧ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.


ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕುಂಡಾಪು ಮನೆ, ಪಾವೂರು ನಿವಾಸಿ ಎಸ್.ಎ ಅಶ್ರಪ್ ಬಂಧಿತ ಆರೋಪಿಯಾಗಿದ್ದಾನೆ. ಶ್ರೀಗಂಧ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಈತ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಆನಂತರ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿ
ಕೊಂಡು ತಿರುಗಾಡುತಿದ್ದನೆನ್ನಲಾಗಿದೆ.

ಉಪಾಧೀಕ್ಷಕರು ಬಂಟ್ವಾಳರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ ಉಪನಿರೀಕ್ಷಕರರಾದ ಧನರಾಜ್ ಟಿ. ಎಂ. ಹಾಗೂ ಚಂದ್ರಶೇಖರ್ ರವರ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಗಳಾದ ಬೆನ್ನಿಚ್ಚನ್, ಗಂಗಾಧರ್ ಹಾಗೂ ಆಶೋಕ್ ರವರು ಕೇರಳ ಪೊಲೀಸರ ಸಹಕಾರದೊಂದಿಗೆ ಕೇರಳದಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈತನ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ LPC No. 125/2004 ಕಲಂ: 279,304(A)ರಂತೆ ಹಾಗೂ ಉಪ್ಪಿನಂಗಡಿ ಮತ್ತು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪಾರೆಸ್ಟ್ ಕಾಯಿದೆಯಡಿ ದಾಖಲಾಗಿರುವ LPC ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಕರಂಬಾರು ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಮಕ್ಕಳ ಮೆಟ್ರಿಕ್‌ ಮೇಳ ಕಾರ್ಯಕ್ರಮ

Suddi Udaya

ಅರ್ಕಜೆ ನಿವಾಸಿ ಆನಂದ ಪೂಜಾರಿ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಬಳಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕಲ್ಲೇರಿ ಅಂಗನವಾಡಿ ಕೇಂದ್ರಕ್ಕೆ ಬದಲಿ ವ್ಯವಸ್ಥೆ- ಮತ್ತೆ ಕಾರ್ಯಾರಂಭಗೊಂಡ ಅಂಗನವಾಡಿ ಕೇಂದ್ರ

Suddi Udaya

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya
error: Content is protected !!