September 6, 2026
ಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ:ಎಕ್ಸೆಲ್ ಶಾಲೆಗಳಲ್ಲಿ ಆರನೆಯ ತರಗತಿಯ ಹಂತದಿಂದಲೇ ಮೆಡಿಕಲ್ ಹಾಗೂ ಐಐಟಿ ಫೌಂಡೇಶನ್ ಕೋರ್ಸ್:ಮಧ್ಯಾಹ್ನದ ಊಟದ ಜೊತೆಗೆ ತಾಲೂಕಿನ ಎಲ್ಲಾ ಭಾಗಗಳಿಂದ ಸ್ಕೂಲ್ ಬಸ್ ವ್ಯವಸ್ಥೆ: ಸುಮಂತ್ ಕುಮಾರ್ ಜೈನ್

ಬೆಳ್ತಂಗಡಿ: ಶೈಕ್ಷಣಿಕ ರಂಗದಲ್ಲಿ ತನ್ನ ಸಾಧನೆಗಳಿಂದ ನೂತನ ಮೈಲಿಗಲ್ಲು ಸ್ಥಾಪಿಸಿದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿನೂತನ ಅವಕಾಶ ಕಲ್ಪಿಸಿದೆ.

7 ನೆಯ ತರಗತಿಯಲ್ಲಿ 96 ಶೇಕಡಾ ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಟನೆಯ ತರಗತಿಯ ಪ್ರವೇಶಾತಿಗೆ ರಿಯಾಯಿತಿ ಶುಲ್ಕ,ಎಂಟನೆಯ ತರಗತಿಯಲ್ಲಿ 96 ಶೇಕಡಾ ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂಬತ್ತನೆಯ ತರಗತಿಯ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.

ಒಂಬತ್ತನೆಯ ತರಗತಿಯಲ್ಲಿ 96 ಶೇಕಡಾ ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಗೆ ಕಡಿಮೆ ಶುಲ್ಕದ ಪ್ರವೇಶಾತಿ ನೀಡಲಾಗುತ್ತದೆ.ವೇಣೂರು ವಿದ್ಯೋದಯ ಕ್ಯಾಂಪಸ್ ನಲ್ಲಿ ಹಾಗೂ ಗುರುವಾಯನಕೆರೆಯ ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಲಿದೆ. ಎಕ್ಸೆಲ್ ಶಾಲೆಗಳಲ್ಲಿ ಆರನೆಯ ತರಗತಿಯ ಹಂತದಿಂದಲೇ ಮೆಡಿಕಲ್ ಹಾಗೂ ಐಐಟಿ ಫೌಂಡೇಶನ್ ಕೋರ್ಸ್ ನಡೆಸಲಾಗುವುದು. ಪ್ರೌಢ ಶಾಲಾ ಹಂತದಲ್ಲಿ ಫೌಂಡೇಶನ್ ಕೋರ್ಸ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು. ಮಧ್ಯಾಹ್ನದ ಊಟದ ಜೊತೆಗೆ ತಾಲೂಕಿನ ಎಲ್ಲಾ ಭಾಗಗಳಿಂದ ಸ್ಕೂಲ್ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದರು.

ಎಕ್ಸೆಲ್ ಶಾಲೆಗಳಲ್ಲಿ ನಿರಂತರವಾಗಿ ವಿಜ್ಞಾನ , ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು.ದೇಶ – ಭಾಷೆಗಳ ಕುರಿತಾಗಿ ಅಭಿಮಾನ ಮೂಡಿಸುವಂತಹ ವಾತಾವರಣವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಕಲ್ಪಿಸಲಿವೆ. ಹೆಚ್ಚಿನ ಮಾಹಿತಿಗೆ 8867242769/9880899769 ಜಂಗಮವಾಣಿಗೆ ಸಂಪರ್ಕಿಸಬಹುದು ಎಂದು ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.

Related posts

ರೆಖ್ಯ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿನಿಯರಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆಅರ್ಜಿ ಆಹ್ವಾನ: 20 ಸಾವಿರ ಶಿಷ್ಯವೇತನ

Suddi Udaya

ಬೆಳ್ತ೦ಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ತುಂಬಿ ಹರಿಯುತ್ತಿರುವ ಶಿಶಿಲದ ಕಪಿಲ ನದಿ: ಕಿಂಡಿ ಅಣೆಕಟ್ಟಿನಲ್ಲಿ ನೀರಿನೊಂದಿಗೆ ತೇಲಿ ಬಂದ ಮರಗಳು: ಗ್ರಾಮಸ್ಥರಿಂದ ಮರ ತೆರವು

Suddi Udaya

ಮಣಿಪಾಲ ಕೆಎಂಸಿಯಿಂದ ಬೆಂಗಳೂರಿನ ಜಯದೇವಆಸ್ಪತ್ರೆಗೆ ಮಗು ವೃಂದಳನ್ನು ತುರ್ತು ಚಿಕಿತ್ಸೆಗೆ ಕರೆದೊಯ್ದ ಈಶ್ವರ್ ಮಲ್ಪೆ ಆಂಬುಲೆನ್ಸ್- ಜಿರೋ ಟ್ರಾಫಿಕ್‌ಗೆ ಸಹಕರಿಸಿದ ಸಾರ್ವಜನಿಕರು, ವಾಹನ ಸವಾರರು ಹಾಗೂ ಪೊಲೀಸರು

Suddi Udaya

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!