September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಹಾರ ಮೇಳ

ಅಳದಂಗಡಿ : ಇಲ್ಲಿನ ಸೈಂಟ್ ಪೀಟರ್ ಕ್ಲೇವರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಆಹಾರ ಮೇಳ ಮಾ.31ರಂದು
ನಡೆಯಿತು.

ಆಹಾರ ಮೇಳದ ಉದ್ಘಾಟನೆಯನ್ನು ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರಾದ ಅಲ್ಪೋನ್ಸ್ ರೋಡ್ರಿಗಸ್, ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಸ್ಟೀವನ್ ಮ್ಯಾಥ್ಯೂ ಪಾಯಿಸ್ , ಶಾಲಾ ಮುಖ್ಯೋಪಾಧ್ಯಾಯಿನಿ ಮೋನಿಕಾ ಎನ್.ಡಿ.ಸೋಜ ಉಪಸ್ಥಿತರಿದ್ದರು.

ಆಹಾರ ಮಳಿಗೆಯಲ್ಲಿ ಬೇರೆ ಬೇರೆ ತರಹದ ತಿಂಡಿ, ತಿನಸು,ಪಾನೀಯಗಳು, ತರಕಾರಿ, ಐಸ್ ಕ್ರೀಂ, ಪಾನೀಪೂರಿ ಹಾಗೂ
ಇನ್ನಿತರ ಆಹಾರಗಳನ್ನು‌ ವಿದ್ಯಾರ್ಥಿಗಳೇ ತಯಾರಿಸಿ ಮಾರುತ್ತಿದ್ದರು.

ಒಂದೊಂದು ಕೌಂಟರಿಗೂ ಬೇರೆ ಬೇರೆ ಹೆಸರುಗಳನ್ನಿಟ್ಟು ಕೌಂಟರ್ ಜವಬ್ದಾರಿ ಶಾಲಾ ಶಿಕ್ಷಕ ವೃಂದದವರಿಗೆ ನೀಡಲಾಗಿತ್ತು.

ಈ ಎಲ್ಲಾ ಕಾರ್ಯಕ್ರಮ ಧರ್ಮಗುರುಗಳಾದ ರೆ.ಫಾ.ಎಲ್ಯಾಸ್ ಪಾಯಿಸ್ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಕಾರ್ಯಕ್ರಮದ ಯಶಸ್ವಿಗೆ, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ‌ ಮಕ್ಕಳ ಹೆತ್ತವರು ಸಹಕರಿಸಿದರು.

Related posts

ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯುವದಿನೋತ್ಸವ ಆಚರಣೆ

Suddi Udaya

ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ವೃತ್ತಿಪರ ಕೋಸ್೯ಗಳ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ಡಾ. ಎಂ. ಮೋಹನ್ ಆಳ್ವರಿಗೆ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಫೆಲೋಶಿಪ್ ಗೌರವ

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಪೆರಿಂಜೆ ಗ್ರಾಮ ಸಮೀಕ್ಷೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya
error: Content is protected !!