September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ ವಹಿಸಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಯದುಪತಿ ಗೌಡ ಇವರು ಯೋಗವನ್ನು ನಮ್ಮ ಜೀವನದದಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿ ಮಕ್ಕಳಿಗೆ ಶುಭಹಾರೈಸಿದರು.

ಯೋಗ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಸುಹಾಸಿನಿ. ಎ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಹರೀಶ್, ಶ್ರೀಮತಿ ಆಶಾಲತಾ ಮತ್ತು ಸುದೀಪ್ ಕಾರ್ಯಕ್ರಮವನ್ನು ಸಂಘಟಿಸಿದರು. ಸಹಶಿಕ್ಷಕಿ ಶ್ರೀಮತಿ ಸುಮಲತ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

Suddi Udaya

ಕನ್ಯಾಡಿII ಸ.ಉ.ಹಿ.ಪ್ರಾ. ಶಾಲೆಗೆ ಪೆಟ್ರೋನೆಟ್ ಎಂ.ಹೆಚ್.ಬಿ ಲಿಮಿಟೆಡ್ ಕಂಪನಿಯಿಂದ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ

Suddi Udaya

ಭಾರೀ ಮಳೆ ಹಿನ್ನೆಲೆ: ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜೂ16)ರಜೆ ಘೋಷಣೆ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಎರಡನೆಯ ಅಧ್ಯಾಯ

Suddi Udaya

ಉಜಿರೆ: ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

Suddi Udaya

ಡಿಸಿ ಮನ್ನಾ ಜಮೀನು ಹಂಚಿಕೆ,: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹಾಗೂ ಸಚಿವ ಯು.ಟಿ ಖಾದರ್ ರವರನ್ನು ಭೇಟಿಯಾದ ದಲಿತ ನಾಯಕರು

Suddi Udaya
error: Content is protected !!