September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ

ಉಜಿರೆ: ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಉಜಿರೆಯ ಕಿಂಡರ್ಗಾರ್ಟನ್ ವಿಭಾಗದಿಂದ ಹೊರಹೋಗುವ ವಿದ್ಯಾರ್ಥಿಗಳಿಂದ ಮಾ.31ರಂದು ಉಜಿರೆ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ ನಡೆಯಿತು.

ಕಿಂಡರ್ಗಾರ್ಟನ್ ಯು.ಕೆ.ಜಿ ಎ, ಬಿ ಹಾಗೂ ಸಿ ವಿಭಾಗಗಳ ಮಕ್ಕಳಿಂದ ಸಂಯುಕ್ತವಾಗಿ ವೆಲ್ಕಮ್ ಡ್ಯಾನ್ಸ್, ಅನಿಮಲ್ ಪರೇಡ್, ಸೇವ್ ಲೈವ್ಸ್ , ದಿಲ್ ಸೇ ಭಾರತ್, ಥೀಮ್ ಡಾನ್ಸ್ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ರುಬೆನ್ ತಮ್ಮ ಕಿಂಡರ್ ಗಾರ್ಟನ್ ಬಗ್ಗೆ ತನ್ನ ಅನಿಸಿಕೆ ಹಂಚಿಕೊಂಡರು.

ಉಜಿರೆ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಡಾ.ರವೀಶ್ ಪಡುಮಲೆ ಅವರನ್ನು ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ. ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸನ್ಮತಿ, ಸಮನ್ವಿ ಭಟ್, ಅವಿಷ್ಕ, ಶಾರ್ವಿ, ಆರುಣ್ಯ ಪ್ರಾರ್ಥಿಸಿದರು.

Related posts

ಪಡ್ಲಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಉಜಿರೆ ಎಸ್‌ಡಿಎಂ ನ್ಯಾಚುರಪತಿ ಕಾಲೇಜಿಗೆ ವಿಶೇಷ ಶಾಶ್ವತ ದೀಪಾಲಂಕಾರ

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಪ್ರಮುಖ 2025: ಜಿಲ್ಲಾಮಟ್ಟದ ವಸ್ತುಪ್ರದರ್ಶನ ಹಾಗೂ ಅಂತರ ಕಾಲೇಜು ಉತ್ಸವ

Suddi Udaya

ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿಗೆ ನಿರ್ವಹಣಾ ಮೇಲ್ವಿಚಾರಕರು ಬೇಕಾಗಿದ್ದಾರೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಶೈಕ್ಷಣಿಕ ಸಾಧಕರ ಅಭಿನಂದನಾ ಕಾರ್ಯಕ್ರಮ

Suddi Udaya

ಮೈರೋಳ್ತಡ್ಕ ಸ.ಉ. ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಶುದ್ಧ ನೀರಿನ ಘಟಕ ಕೊಡುಗೆ

Suddi Udaya
error: Content is protected !!