September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನ ಮಹಿಳೆಯನ್ನು ನಿಂದಿಸಿ 50 ಸಾವಿರ ವಸೂಲಿ ಮಾಡಿದ ವಕೀಲೆ

ಬೆಳ್ತಂಗಡಿ : ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನಿಸಿದನ್ನು ಪ್ರಶ್ನಿಸಿದ್ದಕ್ಕೆಮಾನ ಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ಕೇಳಿ ಬಂದಿದೆ.

ಪ್ರಕರಣ: ದೂರುದಾರೆ ಮಹಿಳೆಗೆ ಗರ್ಡಾಡಿ ಗ್ರಾಮದಲ್ಲಿ ಗಂಡನ ಹೆಸರಿನಲ್ಲಿ ಜಾಗವಿದ್ದು ಅದಕ್ಕೆ ದಿನಾಂಕ 28-3-2025 ರಂದು ಆ ಜಾಗಕ್ಕೆ ಚೇತನಾ, ಅವರ ಸಹೋದರ ಮತ್ತು ಸಹೋದರ, ತಂದೆ ಹಾಗೂ ತಾರನಾಥ ಎಂಬವರು ಅಕ್ರಮವಾಗಿ ಪ್ರವೇಶಿಸಿದ್ದು ಅಡಿಕೆ ಕೃಷಿಯನ್ನು ನಾಶಪಡಿಸಿಲು ಯತ್ನಿಸಿದ್ದಾರೆ. ಈ ವೇಳೆ ಸುಮಾ ಅವರು ಆಕ್ಷೇಪಿಸಿದ್ದು, ಈ ಸಮಯ ಚೇತಾನಾಳ ಸಹೋದರ ಮತ್ತು ತಂದೆ ಮಾನ ಭಂಗ ಮಾಡಲು ಪ್ರಯತ್ನಿಸಿದ್ದು ಬಳಿಕೆ ಕೈಯಿಂದ ಹಲ್ಲೆ ನಡೆಸಿದ್ದಾರೆ.

ಅಲ್ಲದೇ ನೀನು ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಮಗನನ್ನು ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಭಯಭೀತರಾಗಿ ಮಹಿಳೆ ಅವರು ಯಾವುದೇ ದೂರು ನೀಡಿಲ್ಲ. ಆದರೆ ದಿನಾಂಕ: 01.04.2026 ರಂದು ಅವರ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಠಾಣೆಗೆ ಬಂದಾಗ ದೂರುದಾರರ ಪರ ವಕೀಲರಾದ ಟಿಸ್ಮಿ ಅವರು ನೊಂದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ದೂರುದಾರರಿಗೆ 50 ಸಾವಿರ ಮಹಿಳೆ ನೀಡುವಂತೆ ತಾಕೀತು ಮಾಡಿದ್ದಾರಂತೆ.

ಜೊತೆಯಲ್ಲಿದ್ದ ಶಿವಾನಂದರವರು ಹಣದ ವಿಚಾರವನ್ನು ವಕೀಲೆಯ ಕಚೇರಿಯಲ್ಲಿ ನೋಡಿಕೊಳ್ಳಿ ಎಂದು ಹೇಳಿದರಿಂದ ಮಹಿಳೆ ಅವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕರಿಮಣಿ ಸರವನ್ನು ಅಡವಿಟ್ಟು ಟಿಸ್ಮಿ ವಕೀಲೆಗೆ 50 ಸಾವಿರ ನೀಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಏ.1 ರಂದು ದೂರು ನೀಡಿದ್ದು ಅದರಂತೆ BNS-2023 (u/s-76,329(3),115(2),351,r/w3(5)) ಅಡಿಯಲ್ಲಿ ಐದು ಜನ ಆರೋಪಿಗಳಾದ ಚೇತನಾ, ಚೇತನಾ ಸಹೋದರ, ತಾರಾನಾಥ್ ಶೆಟ್ಟಿ, ಚೇತನಾ ತಂದೆ, ವಕೀಲೆ ಟಿಸ್ಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

Related posts

ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ನಾವೂರು ಸ. ಹಿ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಜಾಗೃತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ವಿಜಯ ಕ್ರೆಡಿಟ್ ಸೊಸೈಟಿಗೆ ಡಿ. ಹರ್ಷೇಂದ್ರ ಕುಮಾರ್ ಭೇಟಿ

Suddi Udaya

ಗೇರುಕಟ್ಟೆ: ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಶಿರ್ಲಾಲು ಸಿಎ ಬ್ಯಾಂಕಿನಿಂದ ಎಸ್.ಎಸ್.ಎಲ್.ಸಿ ಸಾಧಕ‌ ವಿದ್ಯಾರ್ಥಿನಿ ತ್ರಿಷಾರವರಿಗೆ ಸನ್ಮಾನ

Suddi Udaya
error: Content is protected !!