September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆ: ಎಸ್.ಡಿ.ಎಂ. ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

ಉಜಿರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ವತಿಯಿಂದ ಜನವರಿಯಲ್ಲಿ ಆಯೋಜಿಸಲಾಗಿದ್ದ ಜೂನಿಯರ್ ರೆಡ್ ಕ್ರಾಸ್ (JRC) ಪರೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಪ್ರಥಮ  ಮತ್ತು ದ್ವಿತೀಯ ಪಿಯುಸಿಯ  93 ವಿದ್ಯಾರ್ಥಿಗಳು ಹಾಜರಾಗಿದ್ದು 24 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (Distinction) ಹಾಗೂ ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಉದಾತ್ತ ತತ್ವಗಳು, ಆರೋಗ್ಯ ಜಾಗೃತಿ, ಮಾನವೀಯ ಸೇವೆ ಹಾಗೂ ಪ್ರಥಮ ಚಿಕಿತ್ಸೆಯಂತಹ ವಿಷಯಗಳ ಕುರಿತು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸಿದ್ದರು.

ವಿದ್ಯಾರ್ಥಿಗಳ ಈ ಶೈಕ್ಷಣಿಕ ಸಾಧನೆಯನ್ನು ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಮೋದ್ ಕುಮಾರ್  ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕದ ಪದಾಧಿಕಾರಿಗಳು ಶ್ಲಾಘಿಸಿದ್ದಾರೆ.

Related posts

ಪೆರಿಂಜೆ : ರಸಿಕ ಕಂಬಳಿ ನಿಧನ

Suddi Udaya

ಶಿಬಾಜೆ: ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಯತ್ನ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಮೂವರು ಆರೋಪಿಗಳ ಬಂಧನ

Suddi Udaya

ಮದ್ದಡ್ಕ: ಪಲ್ಕೆ ನಿವಾಸಿ ಸುನಿಲ್ ಕೊರೆಯ ನಿಧನ

Suddi Udaya

ಶಿರ್ಲಾಲು ಪೇಟೆಯಲ್ಲಿ ಕಾಣಿಸಿಕೊಂಡ ಚಿರತೆ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಗಣೇಶೋತ್ಸವ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya
error: Content is protected !!