September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂದಾರು ಗ್ರಾಮ -ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ: ಶ್ರೀ ದೇವಿ ಮಹಾತ್ಮೆ ಯಕ್ಷಗಾನ

ಬಂದಾರು: ಎ.9 ಬಂದಾರು ಗ್ರಾಮ ಶ್ರೀ ಕ್ಷೇತ್ರ ಕುರಾಯ ಸದಾಶಿವ ದೇವಸ್ಥಾನ ಇದರ ಏ.2 ರಿಂದ 10 ವರೆಗೆ ನಡೆಯುತ್ತಿರುವ ಪ್ರತಿಷ್ಠಾ ಮಹೋತ್ಸವ ಹಾಗೂ ಜಾತ್ರೋತ್ಸವ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಎ.9ರಂದು ಬೆಳಗ್ಗೆ ಗಣಹವನ, ಕವಟೋದ್ಘಾಟನೆ, ಕಟೀಲು ಮೇಳದ ದೇವರ ಮಹಾಪೂಜೆ, ಶ್ರೀ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಪಿಲಿಚಾಮುಂಡಿ ದೈವದ ನೇಮೋತ್ಸವ, ಶ್ರೀ ದೇವರ ಆರಾಟೋತ್ಸವ,ಅವಭ್ರತ ಸ್ನಾನ, ಧ್ವಜಾ ಅವರೋಹಣ, ಭಜನೆ, ಚೌಕಿ ಪೂಜೆ, ರಾತ್ರಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಕುರಾಯ ಬಂದಾರು ಇದರ ವತಿಯಿಂದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣನವರ ಆಶೀರ್ವಾದಗಳೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಗಣ್ಯರು, ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿ , ಅಭಿವೃದ್ಧಿ ಸಮಿತಿ, ಯಕ್ಷಗಾನ ಸಮಿತಿ, ಪದಾಧಿಕಾರಿಗಳು, ಅರ್ಚಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ನಡ: ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ನಿಧನ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.66 ಫಲಿತಾಂಶ

Suddi Udaya

ವೇಣೂರು: ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಂತೆ ಸನಾತನ ಹಿಂದೂ ಧರ್ಮದ 300 ಹೆಣ್ಣು ಮಕ್ಕಳಿಗೆ ಉಚಿತ ಮೂಗುತಿ ಧಾರಣೆ

Suddi Udaya

ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ಸಭೆ: ಅಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಮೂಡಯೂರು, ಕಾರ್ಯದರ್ಶಿಯಾಗಿ ತೇಜಸ್ವಿ ರಾಜ್ ಆಯ್ಕೆ

Suddi Udaya
error: Content is protected !!