25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ವಿಜಯ ಕ್ರೆಡಿಟ್ ಕೋ‌ ಅಪರೇಟೀವ್ ಸೊಸೈಟಿ ಬೆಳ್ತಂಗಡಿ ರೂ.1,848 ಕೋಟಿ ವಾಷಿ೯ಕ ವ್ಯವಹಾರ: ರೂ.5 ಕೋಟಿ ರೂ ನಿವ್ವಳ ಲಾಭ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಕಳೆದ 21 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿರುವ 21 ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಸಂಘದ ಸದಸ್ಯರುಗಳ ಸಹಕಾರದಿಂದ ಅಭೂತಪೂರ್ವ ಸಾಧನೆಯೊಂದಿಗೆ ರೂ. 1848 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ ಶೇ.98 ಸಾಲ ವಸೂಲಾತಿ ಮಾಡಿದ್ದು, ರೂ. 5 ಕೋಟಿ ಲಾಭವನ್ನು ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ಕೊರ್ಯಾರು ತಿಳಿಸಿದರು.

ಅವರು ಗುರುವಾಯನಕೆರೆ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕಾಪು ಮತ್ತು ಅತ್ತಾವರದಲ್ಲಿ ಹೊಸ ಶಾಖೆಯನ್ನು ತೆರೆಯುವ ಬಗ್ಗೆ ಈಗಾಗಲೇ ಕಾರ್ಯ ಯೋಜನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಂಘದ 2025-26 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 36804 ಸದಸ್ಯರಿದ್ದು ಒಟ್ಟು 4.23 ಕೋಟಿ ರೂ ಗಳಷ್ಟು ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘವು 367.04 ಕೋಟಿ ರೂ ಠೇವಣಿಯನ್ನು ಹೊಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 120 ಕೋಟಿ ರೂ. (ಶೇ. 48.11) ಹೆಚ್ಚಳವಾಗಿದೆ. ರೂ.287.94 ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 71 ಕೋಟಿ ರೂ. (ಶೇ. 33.28) ಹೆಚ್ಚಳವಾಗಿದೆ. ಸಂಘವು 1848 ಕೋಟಿ ರೂ ಒಟ್ಟು ವಾರ್ಷಿಕ ವ್ಯವಹಾರವನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 744 ಕೋಟಿ ರೂ. (ಶೇ. 67.23) ಪ್ರಗತಿ ಹೊಂದಿದೆ ಹಾಗೂ ರೂ.5.00 ಕೋಟಿ ರೂ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ರೂ.2.00 ಕೋಟಿಗೂ ಮಿಕ್ಕಿ ಹೆಚ್ಚಳವಾಗಿದೆ. ಸಂಘವು 5.42 ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು 10.17 ಕೋಟಿ ರೂ.ಗಳಷ್ಟು ಇತರ ನಿಧಿಗಳನ್ನು ಹೊಂದಿ, ರೂ. 387 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂ ದಿರುತ್ತದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಿಕೊಂಡು ಬರುತ್ತಿದ್ದು, ಆಡಿಟ್ ವರ್ಗದಲ್ಲಿ ನಿರಂತರವಾಗಿ “ಎ” ಶ್ರೇಣಿಯನ್ನು ಕಾಯ್ದುಕೊಂಡು ಬರುತ್ತಿದೆ. ಸಂಘದ ಕೇಂದ್ರ ಕಛೇರಿ ಮತ್ತು ಗುರುವಾಯನಕೆರೆ, ಬ್ರಹ್ಮಾವರ, ಸುರತ್ಕಲ್ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳ್ತಂಗಡಿಯಲ್ಲಿ 11.50 ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿನಲ್ಲಿ ಖರೀದಿಸಿದ್ದು, 2030ಕ್ಕೆ ಸಂಘದ ಬೆಳ್ಳಿಹಬ್ಬದ ಸಂದರ್ಭಬೆಳ್ತಂಗಡಿಯಲ್ಲಿ ಸಂಘದ ಕೆಂದ್ರ ಕಚೇರಿಗೆ ನೂತನ ಸುಸಜ್ಜಿತ ಕಟ್ಟಡವನ್ನು ಹೊಂದುವ ಯೋಜನೆಯನ್ನು ರೂಪಿಸಲಾಗಿದೆ. ಹಾಗೂ ಪುತ್ತೂರು, ಉರ್ವಮಾರ್ಕೆಟ್ ಮತ್ತು ಉಪ್ಪಿನಂಗಡಿ ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ ನವೀಕೃತಗೊಳಿಸುವ ಬಗ್ಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಘದಲ್ಲಿ ಪ್ರಸ್ತುತ 92 ಸಿಬ್ಬಂದಿಗಳು ಮತ್ತು 55 ನಿತ್ಯ ನಿಧಿ ಸಂಗ್ರಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ 2024-25ನೇ ಸಾಲಿನ 74ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು ಗಳಿಸಿರುತ್ತದೆ. ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ 5 ಬಾರಿ “ಸಾಧನ ಪ್ರಶಸ್ತಿ” ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿರುತ್ತದೆ. ಸಂಘವು ಈ ಆರ್ಥಿಕ ವರ್ಷದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಾಮಾಜಿಕ ಹಾಗೂ ಜನೋಪಯೋಗಿ ಕಾರ್ಯಗಳಿಗೆ ರೂ.5,00,000/-ಕ್ಕೂ ಮಿಕ್ಕಿ ದೇಣಿಗೆ ನೀಡಿರುತ್ತದೆ. ಗ್ರಾಹಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುವ ಸಲುವಾಗಿ ನೆಫ್ಟ್-ಆರ್.ಟಿ.ಜಿ.ಎಸ್ ಸೌಲಭ್ಯ, ಇ-ಸ್ಟಾಂಪ್ ಹಾಗೂ ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಂದು ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಈ ಅಭೂತಪೂರ್ವ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿಯಾ ನಿರ್ದೇಶಕರಿಗೆ, ಸಿಬ್ಬಂದಿ ವರ್ಗಕ್ಕೆ, ಪಿಗ್ಮಿ ಸಂಗ್ರಾಹಕರಿಗೆ, ಸಂಘದ ಸದಸ್ಯರುಗಳಿಗೆ ಹಾಗೂ ಎಲ್ಲಾ ವರ್ಗದ ಗ್ರಾಹಕರಿದ ಅಧ್ಯಕ್ಷರಾದ ಅಜಿತ್ ಜಿ ಶೆಟ್ಟಿ, ಕೊರ್ಯಾರು ಯವರು ಕೃತಜ್ಞ ತೆಯನ್ನು ಸಲ್ಲಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ,‌ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಸುಜಯ್ ಶೆಟ್ಟಿ, ನಿದೇ೯ಶಕರುಗಳಾದ ರಘುರಾಮ ಶೆಟ್ಟಿ ಸಾಧನ, ಪುಷ್ಷಾರಾಜ ಶೆಟ್ಟಿ,ಜಯರಾಮ ಶೆಟ್ಟಿ ಧರ್ಮಸ್ಥಳ, ಬಾಲಕೃಷ್ಣ ಪೂಂಜ, ಸೀತಾರಾಮ ಶೆಟ್ಟಿ, ಜಯರಾಂ ಶೆಟ್ಟಿ ಮುಂಡಾಡಿ, ಕೃಷ್ಣ ರೈ, ವಿಜಯ ರೈ, ಸಾರಿಕಾ ಶೆಟ್ಟಿ, ಪುರಂದರ ಶೆಟ್ಟಿ, ಮಂಜುನಾಥ ರೈ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಅಜೆಕುರಿ ಅಕ್ರಮ ಮರಳು ಅಡ್ಡೆಗೆ ಗಣಿ ಇಲಾಖೆ ದಾಳಿ: ಸ್ಥಳದಲ್ಲಿದ್ದ ನಾಲ್ಕು ಬೋಟ್ ಮತ್ತು ಮರಳು ವಶಕ್ಕೆ

Suddi Udaya

ಜೆ ಇ ಇ ಮೈನ್ಸ್ – 2: ಎಕ್ಸೆಲ್ ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya

ಬೆಳ್ತಂಗಡಿ:ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆ. ಹರೀಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಗಂಗಾಧರ ಮಿತ್ತಮಾರು ಅವಿರೋಧ ಆಯ್ಕೆ

Suddi Udaya

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ ತರಬೇತಿ ದ.ಕ ಜಿಲ್ಲೆಯಿಂದ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಕೆ. ಆಯ್ಕೆ

Suddi Udaya

ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಆನಂದ ಪಾದೆ ರವರಿಗೆ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಚಿಕಿತ್ಸಾ ನೆರವು

Suddi Udaya
error: Content is protected !!