26.2 C
ಪುತ್ತೂರು, ಬೆಳ್ತಂಗಡಿ
June 8, 2026
ಚಿತ್ರ ವರದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 35ನೇ ಶಾಖೆ ಉದ್ಘಾಟನೆ

ಮೂಡುಬಿದಿರೆ: ಸಂಘಟನೆಗಳು ಸಂಸ್ಥೆಗಳಾಗಿ ಮುಂದೆ ಸಾಗಿದಾಗ ಸಂಘಟನೆಯ ಶಕ್ತಿಗೆ ಬೆಲೆ ಬರುತ್ತದೆ. ಈ ಸಹಕಾರ ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರವಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ.ತಾರಾನಾಥ ಪೂಜಾರಿಯವರು ಹೇಳಿದರು.

ಮಂಗಳೂರಿನ ಪಡೀಲ್ ನಲ್ಲಿ ಸ್ವಂತ ಆಡಳಿತ ಕಟ್ಟಡ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 35ನೇ ಶಾಖೆಯನ್ನು ಮೂಡುಬಿದಿರೆ ಅಂಚೆ ಕಚೇರಿ ಎದುರಿನ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ಉತ್ತಮ ನಡವಳಿಕೆ ಹಾಗೂ ಉತ್ತಮ ಉದ್ದೇಶವಿದ್ದರೆ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆ ಅಗತ್ಯವಾಗಿದ್ದು, ವ್ಯಾಜ್ಯಗಳಿಂದ ಆದಷ್ಟು ದೂರವಿರಬೇಕು ಎಂದರು.

ಮೂಲ್ಕಿ- ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಬಲೀಕರಣದ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಹೆಣ್ಣು ಮಕ್ಕಳ ಮದುವೆಗೆ ಸಾಲ ನೀಡಲಾಗುತ್ತಿದೆ. ಶಿಕ್ಷಣ, ಸಾಮಾಜಿಕ ಸೇವೆಗಳಿಗೂ ಈ ಸಂಸ್ಥೆ ಆದ್ಯತೆ ನೀಡುತ್ತಿದೆ. ಶೇ.95ರಷ್ಟು ಮಂದಿ ಮಹಿಳಾ ಸಿಬ್ಬಂದಿ ಇಲ್ಲಿದ್ದು, ದಕ್ಷ ಆಡಳಿತ ಮಂಡಳಿಯೂ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ ತಾರನಾಥ ಪೂಜಾರಿ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಅಂಕ ಗಳಿಸಿದ ಕು. ದಿಶಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ಇದರ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು. ಇದರ ನಿರ್ದೇಶಕರಾದ “ಸಹಕಾರ ರತ್” ಭಾಸ್ಕರ್ ಎಸ್ ಕೋಟ್ಯಾನ್, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮೂಡಬಿದ್ರಿಯ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ವಕೀಲರ ಸಂಘ ಮೂಡಬಿದ್ರಿಯ ಅಧ್ಯಕ್ಷ ಹರೀಶ್ ಪಿ. ಯುವವಾಹಿನಿ ಮೂಡಬಿದ್ರಿ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿಯ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ಪ್ರೆಸ್ ಕ್ಲಬ್ ಮೂಡಬಿದ್ರಿಯ ಅಧ್ಯಕ್ಷ ಸೀತಾರಾಮ್ ಆಚಾರ್ಯ, ಆತ್ಮಶಕ್ತಿ ಸಹಕಾರಿ ಸಂಘದ ನಿರ್ದೇಶಕ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್., ರಾಮನಾಥ ಸನಿಲ್, ಮುದ್ದುಮೂಡುಬೆಳ್ಳೆ, ದಿವಾಕರ ಬಿ.ಪಿ. ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪೂಜಾರಿ ವಂದಿಸಿದರು. ವಿಶ್ವನಾಥ ರೆಂಜಾಳ ನಿರೂಪಿಸಿದರು.

ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10. ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 12000/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ನಮ್ಮ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್‌ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್‌ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಭ್ಯವಿದೆ.

Related posts

ಗಸ್ತು ಅರಣ್ಯ ಪಾಲಕರಾಗಿ ನಾರಾವಿಯ ಅಣ್ಣ-ತಮ್ಮ ನೇಮಕ

Suddi Udaya

ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿಯ ಪುನರ್ ಪ್ರತಿಷ್ಠಾ ಮಹೋತ್ಸವ: ದೈವರಾಧನೆಯ ಮಹಾ ಸಮ್ಮೇಳನ ಪರ್ವ- 2024, ಸಂಪನ್ನ ಸರಕಾರಕ್ಕೆ ನಿರ್ಣಯ ಮಂಡನೆ

Suddi Udaya

ದಯಾ ವಿಶೇಷ ಶಾಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Suddi Udaya

ನದಿಗೆ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

Suddi Udaya

ಶುಭ ಗೋಲ್ಡ್ ಸ್ಕೀಮ್ ಯೋಜನೆಯ ಗಿಫ್ಟ್ ವೋಚರ್ ಡ್ರಾ

Suddi Udaya

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ತಣ್ಣೀರುಪಂತದ ವಿನ್ಯಾ ಪಿ.ಸಿ ಪ್ರಥಮ

Suddi Udaya
error: Content is protected !!