ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಉಜಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ

ಉಜಿರೆ: ಶ್ರೀ ಗುರುನಾರಾಯಣ ಮಂದಿರ ಸೇವಾ ಸಮಿತಿ ಶಿವಗಿರಿ ಇಚ್ಚಿಲ ಉಜಿರೆ, ಶ್ರೀ ಗುರುನಾರಾಯಣ ಸೇವಾ ಸಂಘ ಉಜಿರೆ ಇದರ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ ಹಾಗೂ ಶ್ರೀ ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಎ.24ರಂದು ಜರುಗಿತು.

ಸಮಾರಂಭವನ್ನು ಉಜಿರೆ ಸಿವಿಲ್ ಎಂಜಿನಿಯರ್ ಸೂರ್ಯನಾರಾಯಣ ಕೆ. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಜಿರೆ ಶ್ರೀ ಗುರುನಾರಾಯಣ ಮಂದಿರ ಸೇವಾ ಸಮಿತಿ ಅಧ್ಯಕ್ಷ ರವಿಕುಮಾರ್ ಬರಮೇಲು ವಹಿಸಿ ಪ್ರಸ್ತಾವನೆ ಗೈದರು.

ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನಾದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಶ್ರೀ ನಾರಾಯಣ ಗುರು ಮಂದಿರದ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಕಲಾಯಿ ಭಾಗವಹಿಸಿದ್ದರು. ಉಜಿರೆ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಹರೀಶ್ ಬರಮೇಲು, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಂಜುಳಾ ಉಮೇಶ್, ಶ್ರೀ ಗುರುನಾರಾಯಣ ಮಂದಿರದ ಸೇವಾ ಸಮಿತಿ ಕೋಶಾಧಿಕಾರಿ ಮಂದಿರದ ಸ್ಥಳ ದಾನಿ ಸಚ್ಚಿದಾನಂದ ಇಚ್ಚಿಲ, ಸಿವಿಲ್ ಎಂಜಿನಿಯರ್ ತಾರಾನಾಥ ಪೂಜಾರಿ ಗುರಿಪಳ್ಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರು ಮಂದಿರದ ಸಂಚಾಲಕ ಮನೋಜ್ ಕುಂಜರ್ಪ ಸ್ವಾಗತಿಸಿ, ಗುರು ನಾರಾಯಣ ಸೇವಾ ಸಂಘದ ಕಾರ್ಯದರ್ಶಿ ಯುವರಾಜ್ ಮಣಿಕ್ಕೆ, ಶ್ವೇತಾ ಮಣಿಕ್ಕೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರು ನಾರಾಯಣ ಮಂದಿರ ಸೇವಾ ಸಮಿತಿ, ಶ್ರೀ ಗುರುನಾರಾಯಣ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ವಜಾತಿ ಭಾಂದವರು ಹಾಜರಿದ್ದು ಸಹಕರಿಸಿದರು. ಬೆಳಿಗ್ಗೆ ಗಣಪತಿ ಹೋಮ, ಶ್ರೀ ಗುರುನಾರಾಯಣ ಸ್ವಾಮಿಯ ಪೀಠ ಪ್ರತಿಷ್ಠೆ, ಕಲಶಾಭಿಷೇಕ ಶ್ರೀ ನಾರಾಯಣ ಗುರುಗಳ ಛಾಯಚಿತ್ರ ಪುತಿಷ್ಠೆ ಹಾಗೂ ಗುರುಮಂದಿರ ಉದ್ಘಾಟನೆ, ಗುರುಪೂಜೆ ಜರಗಿತು.

Related posts

ಪೆರಿಂಜೆ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಕೊಕ್ಕಡ: ಕೊಟ್ಟಿಗೆಯಲ್ಲಿ ಪತ್ತೆಯಾದ 12 ಅಡಿ ಉದ್ದದ ಕಾಳಿಂಗ ಸರ್ಪ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಪ್ರಕಾಶ್

Suddi Udaya

ಕಂಗ್ಲಿತ್ಯಾ‌ರ್ ಬಾಬು ಶೆಟ್ಟಿ ನಿಧನ

Suddi Udaya

ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿಯ ಖಾಲಿಯಾರ್ ಆಗಿ ಆಯ್ಕೆ

Suddi Udaya

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಸಂಪನ್ನ

Suddi Udaya

ನಡ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya
error: Content is protected !!