ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೂ.30: ಅಳದಂಗಡಿ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಹರೀಶ್ ರೈ ವಯೋನಿವೃತ್ತಿ

ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತç ಉಪನ್ಯಾಸಕರಾಗಿರುವ ಹರೀಶ್ ರೈ ಅವರು ಜೂ.೩೦ ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ.


ಭಾರತೀಯ ಭೂಸೇನೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದ ಇವರು ಅಸ್ಸಾಂ, ಜಬಲ್ಪುರ್, ಪಠಾಣ್ ಕೋಟ್, ಪಚ್ಮುರಿ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದು ರಕ್ಷಕ್ ಮತ್ತು ಕಾರ್ಗಿಲ್ ಯುದ್ಧವು ಸೇರಿ ಹಲವು ಸೇನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದು ೨೦೦೯ರಲ್ಲಿ ನಿವೃತ್ತಿ ಹೊಂದಿದ್ದಾರೆ. ಬಳಿಕ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ, 2013 ರಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಲಿಂಗಸಗೂರು ಮತ್ತು ಅಳದಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 12 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ರೋಟರಿ, ಎಂಆರ್‌ಪಿಎಲ್ ಮತ್ತು ದಾನಿಗಳ ಸಹಕಾರದಿಂದ ಸಂಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಇವರು ಪ್ರಯತ್ನಿಸಿದ್ದಾರೆ. ಉಜಿರೆ ನಿವಾಸಿಯಾಗಿರುವ ಇವರು ಪತ್ನಿ ಭಾರತಿ, ಹಿರಿಯ ಪುತ್ರಿ ಡಾ. ಅಭಿಜ್ಞ ರೈ, ಅಳಿಯ ಡಾ. ನವೀನ್ ಪಕ್ಕಳ, ಕಿರಿಯ ಪುತ್ರಿ ಶುಭಜ್ಞ ರೈ ಇಂಜಿನಿಯರ್ ಆಗಿದ್ದಾರೆ.

Related posts

ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಸ್ಪೆಕ್ಟ್ರಾ ಅಸೋಸಿಯೇಷನ್ ಚಟುವಟಿಕೆಗಳ ಉದ್ಘಾಟನೆ

Suddi Udaya

ಸಚಿವರಾಗಿ ಆಯ್ಕೆಯಾದ ಯುಟಿ ಖಾದರ್ ರವರಿಗೆ ಗೆಜ್ಜೆಗಿರಿಯ ಸಮಿತಿಯಿಂದ ಅಭಿನಂದನೆ

Suddi Udaya

ಚಾರ್ಮಾಡಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಸ್ಥಾಪನ ದಿನ ಆಚರಣೆ

Suddi Udaya

ಪೆರಿಂಜೆ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆಗೆ ಶೇ.96 ಫಲಿತಾಂಶ

Suddi Udaya

ಗುರುವಾಯನಕೆರೆಯಲ್ಲಿ ಡಾ. ಸವನ್ ರೈ ಬಾರ್ದಡ್ಕ ಬಳಂಜರವರ ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

Suddi Udaya
error: Content is protected !!