28.1 C
ಪುತ್ತೂರು, ಬೆಳ್ತಂಗಡಿ
September 10, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರತಿಭಟನೆಬೆಳ್ತಂಗಡಿರಾಜ್ಯ ಸುದ್ದಿವರದಿ

ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಲೈಸೆನ್ಸ್ ಇಲ್ಲದ ಗನ್ ನಿಂದ ಹಲ್ಲೆ :8 ಮಂದಿ ಆರೋಪಿಗಳ ವಿರುದ್ಧ ಅರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಗರ್ಡಾಡಿಯಲ್ಲಿರುವ ಪಟ್ಟಾ ಜಾಗಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶ ಮಾಡಿ ಕೈಯಿಂದ ಮತ್ತು ಲೈಸೆನ್ಸ್ ಇಲ್ಲದ ಗನ್ ನಿಂದ ಹಲ್ಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಆರ್ಮ್ಸ್ ಆಕ್ಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಸಾರಾಂಶ: ದೂರುದಾರರಾದ ಪಿ.ಆರ್.ಮನೋಹರ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ನೀಡಿದ ಪಿರ್ಯಾದಿಯ ಸಾರಾಂಶವೇನೆಂದರೆ ದಿನಾಂಕ: 24.04.2026 ರಂದು 12:30 ಗಂಟೆಗೆ ಮನೋಹರ ಹಾಗೂ ಅವರ ವಕೀಲೆಯಾದ ಟಿಸ್ಮಿ ಮತ್ತು ಶಾಂತಲಾ ರಾಜೇಶ್ ಪ್ರಭು ಹಾಗೂ ಅವರ ಕೆಲಸದವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ಅವರ ಪಟ್ಟಾ ಜಾಗಕ್ಕೆ ಭೇಟಿ ನೀಡಿದಾಗ ಆರೋಪಿದಾರರಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾ‌ರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಶಶಿರಾಜ್ ಶೆಟ್ಟಿ ಇವರುಗಳು ಆಕ್ರಮವಾಗಿ ಪ್ರವೇಶಿಸಿ ಕೈಯಿಂದ ಹಾಗೂ ಲೈಸನ್ಸ್ ಇಲ್ಲದ ಗನ್ ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನೋಹರ್ ನೀಡಿದ ದೂರಿ‌ನ ಮೇರೆಗೆ ಎ.26 ರಂದು ಆರೋಪಿಗಳಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾ‌ರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ, ಶಶಿರಾಜ್ ಶೆಟ್ಟಿ ಹಾಗೂ ಇತರರ ಮೇಲೆ BNS- 2023(U/s-189(2),191(2), 115(2), 118(1),329(3),351(2),352,190), ARMS ACT 1959 (U/s-25(1)(A)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Related posts

ಬೆಳ್ತಂಗಡಿ : ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಿಶೋರ್ ಪಿ ನೇಮಕ

Suddi Udaya

ಅಳದಂಗಡಿ ಅರಮನೆಯ ಅರಸರಿಂದ ಮತದಾನ: ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು

Suddi Udaya

ನಿಡ್ಲೆ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಟೋಚಾಲಕ

Suddi Udaya

ಅರಸಿನಮಕ್ಕಿ ವಲಯ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಕ್ಕೆ ವಾರ್ಷಿಕ ಲೆಕ್ಕ ಪರಿಶೋಧನೆಯ ಗ್ರೇಡಿಂಗ್ ಪತ್ರ ವಿತರಣೆ

Suddi Udaya

ರಾಜ್ಯಮಟ್ಟದ ಯೋಗ ಸ್ಪರ್ಧೆ: ಕಲ್ಮಂಜ ಶಾಲಾ ವಿದ್ಯಾರ್ಥಿ ಮೋಹಿತ್ ಗೌಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ನಿಡ್ಲೆ: ನೆಡಿಲು ನಾರಾಯಣ ಗೌಡರವರ ತೋಟಕ್ಕೆ ನುಗ್ಗಿದ್ದ ಒಂಟಿ ಸಲಗ: ಹಲವು ಬಾಳೆ ಗಿಡ ಹಾಗೂ ಅಡಿಕೆ ಗಿಡಗಳಿಗೆ ಹಾನಿ

Suddi Udaya
error: Content is protected !!