26.1 C
ಪುತ್ತೂರು, ಬೆಳ್ತಂಗಡಿ
September 11, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದ ರಾ.ಹೆ‌.ಯಲ್ಲಿ 2017 ರಲ್ಲಿ ಲಾರಿ ತಡೆದು ನಡೆಸಿದ ದರೋಡೆ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ:65/2017 ಕಲಂ, 397, 395 ಜೊತೆಗೆ 34 ಐಪಿಸಿ (ರೆಖ್ಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ A-2 ವಾರಂಟ್ ಆರೋಪಿ ಬೆಂಗಳೂರು ಬನಶಂಕರಿ ನಿವಾಸಿ ಮಣಿ @ ಮಣಿಕಂಠ (32) ಎಂಬಾತನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ವೃಷಭ ಮತ್ತು ಚರಣ್ ರಾಜ್ ರವರುಗಳು ಬೆಂಗಳೂರಿನ ಬನಶಂಕರಿ ಮಾರ್ಕೆಟ್ ಬಳಿ ಎ.26 ರಂದು ಖಚಿತ ಮಾಹಿತಿ ಮೇರೆಗೆ ಬಂಧಿಸಿ ಎ.27 ರಂದು ಮಾನ್ಯ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related posts

ಬಂದಾರು : ಬಂದಾರು ಗ್ರಾ.ಪಂ. ನಿಂದ ನಿವೃತ್ತಿ ಪಡೆದ ಸಿಬ್ಬಂದಿ ಮೋಹನ್ ಬಂಗೇರ ರವರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಉಜಿರೆ ನಿನ್ನಿಕಲ್ಲು 33/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಶೀಘ್ರ ಆರಂಭ: ನಿನ್ನಿಕಲ್ಲಿನಲ್ಲಿ 0.96 ಎಕ್ರೆ ಜಾಗ ಮಂಜೂರು: ರೂ. 46.66 ಲಕ್ಷ ಸ್ಥಳ ಮೌಲ್ಯ ಪಾವತಿಗೆ ಸೂಚನೆ

Suddi Udaya

ಜಿಲ್ಲಾ ಮಟ್ಟದ ಅಂತರ್ ಐಟಿಐ ತ್ರೋಬಾಲ್ ಪಂದ್ಯಾಟ: ಎಸ್ ಡಿ ಎಂ ಮಹಿಳಾ ಐಟಿಐ ಪ್ರಥಮ

Suddi Udaya

ಮುಂಬೈಯಲ್ಲಿ ನಡೆದ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಗರ್ಡಾಡಿಯ ರಕ್ಷಿತ್ ಪೈ ದ್ವಿತೀಯ ಸ್ಥಾನ

Suddi Udaya

ಉಜಿರೆ ಗೌಸಿಯ ಯಂಗ್ ಮೆನ್ಸ್ ನ ನೂತನ ಅಧ್ಯಕ್ಷರಾಗಿ ಸಯ್ಯದ್ ಝೈನುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಇಕ್ಬಾಲ್ ಉಜಿರೆ ಆಯ್ಕೆ

Suddi Udaya

ಹೊಸಪಟ್ಣ ಸ.ಕಿ.ಪ್ರಾ. ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya
error: Content is protected !!