September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಲೇರಿಯಲ್ಲಿ ಕೌಶಲ್ಯ ಅಭಿವೃದ್ಧಿ ಉಚಿತ ಸ್ವ ಉದ್ಯೋಗ ತರಬೇತಿಯ ಸಮಾರೋಪ

ತಣ್ಣೀರುಪಂತ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಬ್ಯಾಂಕ್ ಆಫ್ ಬರೋಡ ಉಪ್ಪಿನಂಗಡಿ ಶಾಖೆ ಇವರ ನೇತೃತ್ವದಲ್ಲಿ, 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ತಣ್ಣೀರುಪಂತ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣ ಕಲ್ಲೇರಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವ ಉದ್ಯೋಗ ಮಾಡಲು ಮಹಿಳೆಯರಲ್ಲಿ ಛಲ ಇಚ್ಛಾ ಶಕ್ತಿ ಇದ್ದಲ್ಲಿ ಯಾವ ಕೆಲಸ ಕೂಡ ಸುಲಭ ಸಾಧ್ಯ, ಇನ್ನೂ ಹೆಚ್ಚಿನ ಕೌಶಲ್ಯ ಪಡೆದು ಸ್ವ ಉದ್ಯೋಗಕ್ಕೆ ಎಲ್ಲರೂ ಪ್ರಯತ್ನ ಪಡೆಯಿರಿ ಎಂದು ಕರೆ ನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ ಟೈಲರಿಂಗ್ ಗೆ ಇರುವ ಅವಕಾಶ ಗಳ ಬಗ್ಗೆ ತಿಳಿಸಿ ತರಬೇತಿ ನಂತರ ಎಲ್ಲಾ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿ, ಬ್ಯಾಂಕ್ ನಲ್ಲಿ ಸ್ವ ಉದ್ಯೋಗ ಕ್ಕೆ ಸಿಗುವ ಸೌಲಭ್ಯ ಗಳ ವಿವರಿಸಿದರು. ತರಬೇತಿ ಪೂರೈಸಿದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ತಣ್ಣೀರುಪಂತ ಪಂಚಾಯತ್ ಹಾಲು ಉತ್ಪಾದಕರ ಸೊಸೈಟಿ ಕಾರ್ಯದರ್ಶಿ ಜಯರಾಜ್, ಬ್ರೈಡಲ್ ಮೇಕ್ಅಪ್ ತರಬೇತುದಾರರಾದ ಸಂಧ್ಯಾ ಸಾತ್ವಿಕ್, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು. ಸ್ನೇಹಾ ಭಟ್ ಕಾರ್ಯಕ್ರಮ ನಿರೂಪಿಸಿ, ಸುಖಿತಾ ಶೆಟ್ಟಿ ಸ್ವಾಗತಿಸಿ, ವೇದಾವತಿ ಶೆಟ್ಟಿ ಧನ್ಯವಾದ ಗೈದರು. 3 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Related posts

ಪಂಚಾಯತ್‌ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರುನಲ್ಲಿ ಗ್ರಾಮ ಪಂಚಾಯತ್ ನೌಕರರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

Suddi Udaya

ಮಚ್ಚಿನ: ನೆತ್ತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ನ.29: ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಹೆಚ್.ಬಿ ಲೀಲಾವತಿ ಸೇವಾ ನಿವೃತ್ತಿ

Suddi Udaya

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಆ.16-17: ದ.ಕ. ಜಿಲ್ಲೆಯ ರೈತರಿಗೆ ತೋಟಗಾರಿಕೆ ಬೆಳೆಗಳಲ್ಲಿ ಸಸ್ಯಾಭಿವೃದ್ಧಿ ವಿಷಯದ ಬಗ್ಗೆ ಸಾಂಸ್ಥಿಕ ತರಬೇತಿ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!