26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಗರ ಹಾವಿನ ಮೊಟ್ಟೆಗಳ ರಕ್ಷಣೆ-16 ಮರಿಗಳಿಗೆ ಜೀವದಾನ

ಬೆಳ್ತಂಗಡಿ: ಮನೆಯ ಗೋಡೆಯೊಂದರಲ್ಲಿ ಸಿಕ್ಕಿದ ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ರಕ್ಷಿಸಿ 16 ಮರಿಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.

ನೆರಿಯ ಗ್ರಾಮದ ಗುಂಡಿಕಂಡ ಬೊಮ್ಮಣ್ಣ ಗೌಡ ಎಂಬವರ ಮನೆಯ ಗೋಡೆಯ ಒಳಗಡೆ ಕಳೆದ ಕೆಲವು ದಿನಗಳ ಹಿಂದೆ ನಾಗರಹಾವು ಕಂಡುಬಂದಿತ್ತು.ಇದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲು ಸಮಾಜ ಸೇವಕ, ಉರಗ ಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಲಾಗಿತ್ತು.

ಗೋಡೆಯ ಒಳಗಡೆ ಇದ್ದ ನಾಗರಹಾವನ್ನು ಹಿಡಿದಾಗ ಸುಮಾರು 16 ಮೊಟ್ಟೆಗಳು ಪತ್ತೆಯಾಗಿದ್ದವು. ಈ ಮೊಟ್ಟೆಗಳಿಗೆ ಇರುವೆಗಳು ಮುತ್ತಿಕೊಂಡಿದ್ದು ಅವುಗಳ ಸ್ಥಿತಿ ಅಪಾಯಕಾರಿಯಾಗಿತ್ತು‌. ಇದನ್ನು ಗಮನಿಸಿ ಅವುಗಳನ್ನು ಗೋಡೆಯಿಂದ ಹೊರ ತೆಗೆದು ಅಗತ್ಯ ಆರೈಕೆ ನೀಡಿ ಕೃತಕ ಕಾವು ನೀಡುವ ಕೆಲಸವನ್ನು ಮಾಡಿದರು. ಇದೀಗ 16 ಮರಿಗಳು ಮೊಟ್ಟೆಯಿಂದ ಹೊರಬಂದಿವೆ. ಆರೋಗ್ಯವಾಗಿದ್ದ ಈ ನಾಗರಹಾವಿನ ಮರಿಗಳನ್ನು ಅರಣ್ಯ ಇಲಾಖೆಯ ಸಹಕಾರದಲ್ಲಿ ಚಾರ್ಮಾಡಿ ಘಾಟಿ ವಿಭಾಗದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಕಳೆದ ತಿಂಗಳು ತೋಟತ್ತಾಡಿ ಗ್ರಾಮದಲ್ಲಿ ಪತ್ತೆಯಾಗಿದ್ದ 28 ನೀರು ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಿಗಳಿಗೆ ಜೀವದಾನ ನೀಡಲಾಗಿತ್ತು. ಇದೀಗ ನೆರಿಯದಲ್ಲಿ ಇರುವೆಗಳ ದಾಳಿಗೆ ಒಳಗಾಗಿದ್ದ ನಾಗರಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಕೃತಕ ಕಾವು ನೀಡಿ ಮರಿಗಳನ್ನು ಅರಣ್ಯಕ್ಕೆ ಬಿಡಲಾಗಿದೆ.ಸ್ನೇಕ್ ಅನಿಲ್, ಉರಗ ಮಿತ್ರ ಕಕ್ಕಿಂಜೆ

Related posts

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ವೇಣೂರು ಯುವವಾಹಿನಿ ಘಟಕದಿಂದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭದ ಶೋಭಾಯಾತ್ರೆಗೆ ಉಜಿರೆಯಲ್ಲಿ ಗಣ್ಯರಿಂದ ಚಾಲನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

Suddi Udaya

ಹತ್ಯಡ್ಕ: ಕೊಡಂಗೆ ನಿವಾಸಿ ಹರಿಹರ ಹೆಬ್ಬಾರ್ ಗೋಖಲೆ ನಿಧನ

Suddi Udaya
error: Content is protected !!