31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆಸರ್ಕಾರಿ ಇಲಾಖಾ ಸುದ್ದಿ

ಪ.ಜಾತಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ: 2026-27ನೇ ಸಾಲಿನ ಪ.ಜಾತಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಎಸ್.ಎಸ್.ಪಿ ವಿದ್ಯಾರ್ಥಿ ವೇತನಕ್ಕೆ ನೋಂದಣಿ ಮಾಡಿರಬೇಕು ಹಾಗೂ ಎಸ್.ಎಸ್.ಪಿ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಆದುದರಿಂದ ವಿದ್ಯಾರ್ಥಿಗಳು ಇಲಾಖಾ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಬೆಳ್ತಂಗಡಿ ತಾಲೂಕು ಇವರನ್ನು ಸಂಪರ್ಕಿಸುವುವಂತೆ (ದೂರವಾಣಿ ಸಂಖ್ಯೆ:08256-233528) ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪ.ಜಾತಿ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳಿಗೆ : TO APPLY ONLINE: https://swdhmis.karnataka.gov.in

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ.ಜಾತಿ ಮೆಟ್ರಿಕ್ ಪೂರ್ವ : 30.06.2026 ಪ.ಜಾತಿ ಮೆಟ್ರಿಕ್ ನಂತರದ : 31.07.2026, ಆದಾಯ ಮಿತಿ : ಪ.ಜಾತಿ/ಪ.ವರ್ಗ : ರೂ.2.50 ಲಕ್ಷ, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ: 9480843113

ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು: 1) ಆಧಾರ್ ಕಾರ್ಡ್ ಪ್ರತಿ. 2)ಜಾತಿ & ಆದಾಯ ಪ್ರಮಾಣ ಪತ್ರದ ಪ್ರತಿ. 3)ಹಿಂದಿನ ವರ್ಷದ ಅಂಕ ಪಟ್ಟಿ / ಎಸ್ ಎಸ್ ಎಲ್ ಸಿ ಅಂಕ ಪಟ್ಟಿ. 4)ಎಸ್.ಎಸ್.ಪಿ ನಂಬರ್ / ಸ್ಯಾಟ್ಸ್ ನಂಬರ್ 5)ಭಾವಚಿತ್ರ.

Related posts

ನಿಡ್ಲೆ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ರಾಜ್ಯ ಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ವಿದ್ಯಾರ್ಥಿ ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿ ಯವರನ್ನು ಭೇಟಿಯಾದ ಎಸ್.ಡಿ.ಪಿ.ಐ ನಾಯಕರು

Suddi Udaya

ಅಳದಂಗಡಿ ಪ.ಪೂ. ಕಾಲೇಜಿನಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳ ಉದ್ಘಾಟನೆ

Suddi Udaya

ಬೆದ್ರಬೆಟ್ಟು : ಶಾಲಾ ಪ್ರಾರಂಭೋತ್ಸವ ಹಾಗೂ ಶಾಲಾ ಮಂತ್ರಿಮಂಡಲದ ಉದ್ಘಾಟನೆ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya
error: Content is protected !!