24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಕಳಿಯ ಗ್ರಾಮ ಪಂಚಾಯತ್ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಆರು ದಿನಗಳು ನಡೆದ ಗ್ರಾಮೀಣ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞ. ಕೆ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಶಿಬಿರದಲ್ಲಿ ಭಾಗವಹಿಸಿದ ಸುಗಮಕಾರರು, ಪೋಷಕರು ಮತ್ತು ಪಂಚಾಯತಿ ಸಿಬ್ಬಂದಿಯವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಜಯಲಕ್ಷ್ಮಿ, ಲಾಸ್ಯ. ಪಿ , ಸುಕೇಶ್ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಸುಗಮಕಾರರಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ, ಶಿಕ್ಷಕಿಗೀತಾ, ಯೋಗ ಪಟು ಸತೀಶ್ ಭಂಡಾರಿ, ಆರೋಗ್ಯ ಅಧಿಕಾರಿ ಡಾ. ನಾಗರಾಜ್, ಕ್ರಾಫ್ಟ್ ಶಿಕ್ಷಕ ಪ್ರವೀಣ್ ಇವರಿಗೆ ಪ್ರಶಂಸಾ ಪತ್ರ , ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ , ಪ್ರಮಾಣ ಪತ್ರ ನೀಡಲಾಯಿತು. ಶ್ರೀ ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಪ್ರಾಯೋಜಿತ ಶ್ರೀ ಮಹಾಭಾರತ ಸರಣಿಯ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಪುಸ್ತಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಗುತ್ತಿಗೆದಾರ ನಿತೇಶ್ ಮಜಲು ,ಪಂಚಾಯತ್ ಸಿಬ್ಬಂದಿ ಐಸ್ ಕ್ರೀಮ್ ನೀಡಿ ಸಹಕರಿಸಿದರು . ಶಿಬಿರಾರ್ಥಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ ಅರಿವು ಕೇಂದ್ರದ ಮೇಲ್ವಿಚಾರಕಿ ಪ್ರಮೀಳಾ ವಂದಿಸಿದರು.

Related posts

ಮಡಿಕೇರಿಯಲ್ಲಿ ನೂತನ ಮುಳಿಯ ಸಿಲ್ವರಿಯ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ

Suddi Udaya

ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ವನಮಹೋತ್ಸವ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಕೂಡಬೆಟ್ಟು ಸದಾಶಿವ ದೇವಸ್ಥಾನದಲ್ಲಿ ಶತರುದ್ರಾಭಿಷೇಕ

Suddi Udaya

ಆರಂಬೋಡಿ ಬಿರ್ವೆರ್ ಕೂಟ ವತಿಯಿಂದ ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣ ರವರಿಗೆ ಸನ್ಮಾನ

Suddi Udaya
error: Content is protected !!