25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮಾರಿಗುಡಿ ಬಳಿ ದುರ್ನಾತ ಬೀರುವ ಒಳ ಚರಂಡಿ

ಬೆಳ್ತಂಗಡಿ: ಅತ್ಯಂತ ಕಾರಣಿಕ ಕ್ಷೇತ್ರ ಎಂದೇ ಪ್ರಖ್ಯಾತವಾದ ಬೆಳ್ತಂಗಡಿ ನಗರದ ಮಾರಿಗುಡಿಗೆ ಪ್ರವೇಶಿಸುವ ಭಕ್ತರು ಒಂದು ಕೈ ಮೂಗಿಗೆ ಹಿಡಿಯಲೇ ಬೇಕು. ಇದು ನಿಯಮವಲ್ಲ, ಬದಲಿಗೆ ಅಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.


ಇದಕ್ಕೆ ಕಾರಣ ಮಾರಿಗುಡಿ ಬಳಿಯಲ್ಲಿ ಹಾದು ಹೋಗಿರುವ ಒಳಚರಂಡಿ. ಈ ಒಳಚರಂಡಿಯಲ್ಲಿ ಮಲೀನ ನೀರು ನಿಂತು ದುರ್ನಾತ ಬೀರುತ್ತಿದೆ. ಮಾರಿಗುಡಿಗೆ ಹೋಗಬೇಕಾದರೆ ಈ ಚರಂಡಿಯನ್ನು ದಾಟಿಕೊಂಡೇ ಹೋಗಬೇಕು. ಇದು ತೆರೆದ ಸಿಸಿ ಚರಂಡಿ, ಹತ್ತಿರ ಹೊಟೇಲ್, ರೂಮ್‌ಗಳ ಗಲೀಜು ನೀರು ನೇರವಾಗಿ ಬರುವುದು ಚರಂಡಿಗೆ. ಕೆಲವರು ಮಲೀನ ನೀರನ್ನು ಪೈಪ್ ಹಾಕಿ ಚರಂಡಿಯಲ್ಲೇ ಸ್ವಲ್ಪ ದೂರದವರೆಗೆ ಹೋಗುವಾಗೆ ಮಾಡಿದ್ದಾರೆ. ಯಾಕೆಂದರೆ ಅವರ ಹೊಟೇಲ್, ರೂಮ್, ಇತರ ಕಡೆಗಳಲ್ಲಿ ದುರ್ವಾಸನೆ ಬರಬಾರದು ಎಂದು. ಈ ಮಲೀನ ನೀರೆಲ್ಲ ಬಂದು ಸಂಗ್ರಹ ಆಗುವುದು ಮಾರಿಗುಡಿ ಬಳಿಯಲ್ಲಿ.

ಮಾರಿಗುಡಿಗೆ ಬರುವವರು, ಸ್ಥಳೀಯರು, ವಾಹನಗಳ ಚಾಲಕರು ಹಾಗೂ ದೂರದೂರಿನ ಭಕ್ತರು. ಹೆಚ್ಚಾಗಿ ಮಂಗಳವಾರ, ಶುಕ್ರವಾರ, ಆದಿತ್ಯವಾರ ನೂರಾರು ಸಂಖ್ಯೆಯಲ್ಲಿ ಮಾರಿಗುಡಿಗೆ ಬರುವವರಿದ್ದಾರೆ. ಅವರ ಪಾಡಂತು ಹೇಳತೀರದು. ಯಾಕೆಂದರೆ ಅವರು ಬೆಳಿಗ್ಗೆ ಬಂದರೆ ಮಧ್ಯಾಹ್ನ ಸುಮಾರು ಮೂರು ಗಂಟೆಯವರಿಗೆ ಮಾರಿಗುಡಿಯಲ್ಲಿ ಇರುತ್ತಾರೆ. ಈ ದುರ್ನಾತವನ್ನು ಸಹಿಸಿಕೊಂಡು ಅಲ್ಲಿರುವುದು ದೊಡ್ಡ ಹಿಂಸೆಯಾಗಿದೆ. ಗಾಳಿ ಬೀಸಿದಾಗ ಈ ದುರ್ನಾತ ಒಳಗೆ ಕೂತಿರುವ ಭಕ್ತರ ಮೂಗಿಗೂ ಬಡಿಯುತ್ತದೆ. ಇದು ಭಕ್ತರಿಗೆ ದೊಡ್ಡ ಕಿರಿಕಿರಿಯನ್ನುಂಟು ಮಾಡುತ್ತಿದೆ.


ಪಂಚಾಯತು ಅಧಿಕಾರಿಗಳಿಗೆ, ಆಡಳಿತಾಧಿಕಾರಿಗಳಿಗೆ ಮಾರಿಗುಡಿ ಪರಿಸರದಲ್ಲಿ ಚರಂಡಿ ದುರ್ನಾತ ಬೀರುತ್ತಿರುವ ವಿಷಯ ಗೊತ್ತಿದೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿರುವುದು ಕಾರಣ. ಹೆದ್ದಾರಿ ನಿರ್ಮಾಣದ ವೇಳೆ ರಸ್ತೆಯ ಎರಡು ಕಡೆಗಳಲ್ಲೂ ಒಳಚರಂಡಿ ಆಗುತ್ತದೆ. ಅದಕ್ಕಾಗಿ ಅವರು ಒಳಚರಂಡಿಯನ್ನು ಸ್ಚಚ್ಛಗೊಳಿಸುವ ಕಾರ್ಯವನ್ನು ಮಾಡದೆ ಮೌನವಾಗಿ ಕುಳಿತು ನೋಡುತ್ತಿದ್ದಾರೆ… ಆದರೆ ಒಳಚರಂಡಿ ಆಗುವವರೆಗೆ ಭಕ್ತರ ಸಂಕಷ್ಟವನ್ನು ಕೇಳುವವರು ಯಾರು..? ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ…||

Related posts

ಕೆಪಿಎಸ್ ಪುಂಜಾಲಕಟ್ಟೆ ಪದವಿಪೂರ್ವ ವಿಭಾಗದ ಕಾಲೇಜು ವಾರ್ಷಿಕೋತ್ಸವ

Suddi Udaya

ಧರ್ಮಸ್ಥಳ: ಎಸ್.ಐ.ಟಿ ಅಧಿಕಾರಿಗಳಿಗೆ ಮೃತದೇಹಗಳನ್ನು ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ ಗುರುತಿಸಿದ ಸ್ಥಳಗಳಿಗೆ ಶಸ್ತ್ರ ಸಜ್ಜಿತ ಎ.ಎನ್.ಎಫ್ ಸಿಬ್ಬಂದಿಗಳಿಂದ ಬಿಗಿ ಭದ್ರತೆ ನಾಳೆ ಮತ್ತೆ ಸ್ಥಳ ಮಹಜರು ಕಾರ್ಯ ಮುಂದುವರಿಕೆ

Suddi Udaya

ಸೌತಡ್ಕ ದೇವಸ್ಥಾನಕ್ಕೆ ಸ್ಥಿರಾಸ್ತಿ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಸಹಾಯಕ ಆಯುಕ್ತರಿಂದ ಆದೇಶ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜು ಮತ್ತು ಎಸ್‌ಡಿಎಂ ಕ್ರೀಡಾ ಸಂಘದ ವತಿಯಿಂದ ಯೋಗ ಶಿಬಿರ ಉದ್ಘಾಟನೆ

Suddi Udaya

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya

ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನ ಜೆಸಿಐ ಬೆಳ್ತಂಗಡಿಗೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ, ಘಟಕಾಧ್ಯಕ್ಷೆ ಆಶಾಲತಾ ಪ್ರಶಾಂತ್ ರವರಿಗೆ ಅತ್ಯುತ್ತಮ ಅಧ್ಯಕ್ಷೆ ರನ್ನರ್ ಪ್ರಶಸ್ತಿ

Suddi Udaya
error: Content is protected !!