32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಂಪನ್ನ: ಉತ್ತಮ ಹೈನುಗಾರರು ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

ಅಳದಂಗಡಿ: ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಮೇ.21 ರಂದು ಅಳದಂಗಡಿಯಲ್ಲಿ ಅದ್ದೂರಿಯಾಗಿ ಜರುಗಿತು.


ಕಾಯ೯ಕ್ರಮವನ್ನು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರಿನ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಕ್ಕೂಟದಲ್ಲಿ ದಿನಕ್ಕೆ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಗ್ರಾಹಕರಿಗೆ ಹಾಲು ಸೇರಿದಂತೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡಿ, ಗ್ರಾಹಕರಿಗೆ ಅತಿ ಹೆಚ್ಚಿನ ದರ ಕೊಡುವ ವ್ಯವಸ್ಥೆ ಒಕ್ಕೂಟ ಮಾಡುತ್ತಿದೆ ಎಂದು ಹೇಳಿದರು. ಸರಕಾರದ ಅನುದಾನ ಸೇರಿದಂತೆ ಗ್ರಾಹಕರಿಗೆ ಈಗ ಒಂದು ಲೀಟರ್ ಗೆ ರೂ.47 ದರ ಸಿಗುತ್ತದೆ. ಸ್ವಾವಲಂಬನೆಯ ಜೀವನನಕ್ಕೆ ಹೈನುಗಾರಿಕೆ ಈಗ ಪೂರಕವಾಗಿದೆ ಎಂದು ತಿಳಿಸಿದರು.

ಸಂತ ಪೀಟರ್ ಕ್ಲೇವರ್ ಚರ್ಚ್ ಅಳದಂಗಡಿ ಧರ್ಮಗುರುಗಳಾದ ರೇ| ಫಾ। ಎಲಿಯಾಸ್ ಡಿಸೋಜ ಆಶೀರ್ವಚನ ನೀಡಿ, ಅಳದಂಗಡಿ ಸಂಘ ಉತ್ತಮ ಚಟುವಟಿಕೆ ಮೂಲಕ ಮಾದರಿಯಾಗಿ ನಡೆಯುತ್ತಿದ್ದು, ಗ್ರಾಮದ ಜನರ ಸಹಕಾರ ಅನನ್ಯವಾಗಿದೆ ಎಂದರು.

ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರು ಅಳದಂಗಡಿ ಅರಮನೆ ಇವರು ಉತ್ತಮ ಹೈನುಗಾರರನ್ನು, ಮಾಜಿ ಅಧ್ಯಕ್ಷರು ಗಳನ್ನು ಸನ್ಮಾನಿಸಿದರು.
ಹಾ.ಉ.ಸ.ಸಂಘ, ಅಳದಂಗಡಿ ಇದರ ಅಧ್ಯಕ್ಷರಾದ, ಪ್ರಶಾಂತ್ ವೇಗಸ್ ಅಧ್ಯಕ್ಷತೆ ವಹಿಸಿ, ಸಂಘ 50 ವಷ೯ಗಳ ಸಾಧನೆಯನ್ನು ತಿಳಿಸಿ, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಂಬಳ ಓಟದ ಸಾಧಕ ಸತೀಶ್ ದೇವಾಡಿಗ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್ ಪ್ರಭಾಕರ, ಕಾಶಿಪಟ್ನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್, ಮಂಗಳೂರಿನ ನಿರ್ದೇಶಕರಾದ ಸಹಕಾರ ರತ್ನ ಸತೀಶ್ ಕೆ ಕಾಶಿಪಟ್ಟ, , ಅಳದಂಗಡಿಯ ಉದ್ಯಮಿಗಳಾದ ಸತೀಶ್ ಪೂಜಾರಿ, ನಡಾಯಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಅಳದಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೀರಾ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೆ.ಎಂ.ಎಫ್ ಉಪ ವ್ಯವಸ್ಥಾಪಕ ಸತೀಶ್ ರಾವ್, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಅಳಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಅಳದಂಗಡಿ ಹಾ.ಉ.ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಸುವರ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ಪ್ರೆಡ್ ಫೆರ್ನಾಂಡಿಸ್, ನಿರ್ದೇಶಕರಾದ ಪ್ರಸಾದ್ ಪಿಂಟೋ, ಗಣೇಶ್ ದೇವಾಡಿಗ, ಲ್ಯಾನ್ಸಿ ರೊಡ್ರಿಗಸ್, ಧಣ೯ಪ್ಪ ಪೂಜಾರಿ, ಸುಧೀರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ, ಸುಂದರ್, ಸುನಿಲ್, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲ್ಪ್ರೆಡ್ ಫೆರ್ನಾಂಡಿಸ್ ಸಂಘದ ಸಾಧನೆಯ ವರದಿ ವಾಚಿಸಿದರು.
ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

  • ಚಿತ್ರ: ಜ್ಯೋತಿಕಾ ಅಳದಂಗಡಿ

Related posts

ಎ.6: ಬೆಂಗಳೂರು ಶ್ರೀ‌ ಪ್ರಸನ್ನ ಕಾರ್ಯಸಿದ್ದಿ ಬೈಲಾಂಜನೇಯ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಹಾಗೂ ಸವಣಾಲು ಪಲ್ಗುಣಿ ಭಜನಾ ತಂಡ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಬೆಳಾಲು ಸೊಸೈಟಿ ಹಗರಣ ಪ್ರಕರಣ : ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಹಲ್ಲೆ

Suddi Udaya

ಬೆಳ್ತಂಗಡಿ ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ

Suddi Udaya

ವಾಣಿ ಪಿಯು ಕಾಲೇಜಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಅಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ಭೇಟಿ

Suddi Udaya

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!