26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಡ್ಗಿಚ್ಚು, ಹುಲಿ ಗಣತಿ ಹಿನ್ನೆಲೆ ಪ್ರವಾಸಿಗರ ಸಂಚಾರಕ್ಕೆ ವಿಧಿಸಿದ್ದ ನಿಷೇಧ ತೆರವು: ಜೂ.1 ರಿಂದ ಪ್ರವಾಸಿಗರಿಗೆ ಚಾರಣ, ಜಲಪಾತ ವೀಕ್ಷಣೆಗೆ ಅವಕಾಶ

ಬೆಳ್ತಂಗಡಿ: ತಾಲೂಕಿನ ಚಾರಣ ಸ್ಥಳ, ಪ್ರಮುಖ ಜಲಪಾತ ಜೂನ್ 1ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ, ಗಡಾಯಿಕಲ್ಲು ಮೊದಲಾದ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.

ಬೇಸಿಗೆಯಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ತಾಲೂಕಿನ ಮಲವಂತಿಗೆ ಗ್ರಾಮ ಅತಿ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಅರಣ್ಯ ಪ್ರದೇಶವಾದ ಇಲ್ಲಿಗೆ ಚಾರಣಿಗರು, ಜಲಪಾತ ವೀಕ್ಷಕರು ಆಗಮಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಪ್ರಕರಣಗಳ ಭಯ ಸಾಕಷ್ಟಿದೆ. ಇಲ್ಲಿ ಒಂದು ಕಿಡಿ ಬೆಂಕಿ ಬಿದ್ದರೂ ಅದು ತಕ್ಷಣ ಇಡೀ ಪರಿಸರವನ್ನು ವ್ಯಾಪಿಸುತ್ತದೆ. ಪ್ರವಾಸಿಗರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಅನಾಹುತಗಳು ಉಂಟಾಗುತ್ತವೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ನಿಷೇಧ ಹೇರಿತ್ತು.

ಕಡಮ ಗುಂಡಿ ಹಾಗೂ ಬೊಳ್ಳೆ ಜಲಪಾತಗಳು ಈಗಾಗಲೇ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿವೆ. ಖಾಸಗಿ ಸ್ಥಳದಲ್ಲಿರುವ ಎರ್ಮಾಯಿ ಜಲಪಾತ ವೀಕ್ಷಣೆಗೆ ಯಾವುದೇ ನಿರ್ಬಂಧ ಇರಲಿಲ್ಲ.

ಮಳೆ ಸಹಕಾರ: ಈ ಬಾರಿ ಆಗಾಗ ಸುರಿದ ಬೇಸಿಗೆ ಮಳೆಯಿಂದ ಅರಣ್ಯ ಪ್ರದೇಶವೆಲ್ಲ ಒದ್ದೆಯಾಗಿದ್ದು, ಹಸಿರಿನಿಂದ ನಳನಳಿಸುತ್ತಿದೆ. ಅಲ್ಲಿನ ಹಳ್ಳ, ತೊರೆಗಳಲ್ಲಿ ಸಾಮಾನ್ಯ ಪ್ರಮಾಣದ ನೀರ ಹರಿವು ಆರಂಭವಾಗಿದೆ. ಇದರಿಂದ ಪ್ರಸ್ತುತ ಬೆಂಕಿ ಪ್ರಕರಣ, ಕಾಡ್ಗಿಚ್ಚಿನ ಭಯ ದೂರವಾಗಿದ್ದು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಆ ಸಮಯ ಜಲಪಾತಗಳು ಹೆಚ್ಚಿನ ನೀರಿನೊಂದಿಗೆ ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿವೆ.

Related posts

ಮಾಜಿ ಅಧ್ಯಕ್ಷ ಹಾಲಿ ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಸತತ ಹೋರಾಟದಿಂದ ತೆಕ್ಕಾರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಂಜೂರು ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಆರೋಗ್ಯ ಸಚಿವರಿಗೆ ಮತ್ತೊಂದು ಮನವಿ

Suddi Udaya

ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ್ ಆಚಾರ್ಯ ನೇಮಕ

Suddi Udaya

ಬಂದಾರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ದಿನೇಶ್ ಖಂಡಿಗ ಆಯ್ಕೆ

Suddi Udaya

ಮಾ.1: ಕನ್ಯಾಡಿ ನೇರೋಳ್‌ಪಲ್ಕೆ ಕೇಸರಿ ಗೆಳೆಯರ ಬಳಗದಿಂದ 12 ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಜ. 29-31: ಬೆಳ್ತಂಗಡಿ ಸ್ಪಂದನ ಪಾಲಿಕ್ಲಿನಿಕ್ ಮತ್ತು ಲ್ಯಾಬೋರೇಟರಿ ಹಾಗೂ ಸ್ಪಂದನ ಕ್ಲಿನಿಕ್‌ನಲ್ಲಿ ಉಚಿತ ಹಾಗೂ ವಿಶೇಷ ರಿಯಾಯಿತಿ

Suddi Udaya
error: Content is protected !!