26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಿಗೆ ‘ವೃತ್ತಿ-ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಾಗಾರ

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಅಧೀನದ ಕನ್ನಡ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ದಿನದ ‘ವೃತ್ತಿ-ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಾಗಾರ ಮೇ 25 ರಂದು ನಡೆಯಿತು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿಷಯಾಧಾರಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

“ಪ್ರತಿ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಮತ್ತು ಭಾಷಾ ವಿಷಯದಲ್ಲೂ ಪ್ರಾವೀಣ್ಯ ಪಡೆದಿರುವ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಇದರಿಂದ ನಿಮ್ಮ ಜ್ಞಾನವನ್ನು ವೃದ್ಧಿಸಬಹುದು” ಎಂದರು.

ವಿಷಯ ಪರಿಣತರಾದ ಸುಬ್ರಹ್ಮಣ್ಯ ಕೆ., ವಿನುತಾ, ಹೇಮಂತ್ (ವಿಜ್ಞಾನ), ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ (ಭಾಷೆ), ತಿಲೋಶ್ ಕುಮಾರ್ ಸಿ. (ಗಣಿತ), ರಂಜಿತಾ ರಾಜೀವ್ (ಕಲೆ) ಅವರು ಶಿಕ್ಷಕರಿಗೆ ಮಾಹಿತಿ, ತರಬೇತಿ ನೀಡಿದರು.

ಉಜಿರೆಯ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ ಮುಖ್ಯೋಪಾಧ್ಯಾಯಿನಿ ವಿದ್ಯಾ ಟಿ. ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಪೆರಿಂಜೆ ಶ್ರೀ ಧ. ಮಂ. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮುಕುಂದಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧರ್ಮಸ್ಥಳದ ಶ್ರೀ ಧ. ಮಂಜುನಾಥ ಸ್ವಾಮಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು.

Related posts

ಜಿ. ಕೃಷ್ಣ ಬೆಳ್ತಂಗಡಿ ನಿರ್ದೇಶನದ ” ಇದು ನಮ್ ಶಾಲೆ ” ಚಲನಚಿತ್ರದ ಪೋಸ್ಟರ್ ಹಾಗೂ ವಿಡಿಯೋ ಹಾಡುಗಳ” ಬಿಡುಗಡೆ

Suddi Udaya

ಉರುವಾಲು : ಮುಹಮ್ಮದ್ ರಾಝಿಖ್ ದುಬೈನಲ್ಲಿ ಅನುಮಾನಸ್ಪದವಾಗಿ ಸಾವು

Suddi Udaya

ಅಳದಂಗಡಿ: ಜನಮಂಗಳ ಕಾರ್ಯಕ್ರದಡಿ ವಿಲ್ ಚೇರ್ ವಿತರಣೆ

Suddi Udaya

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ವೈಭವಪೂರ್ಣ ಹಸಿರುವಾಣಿ ಸಮರ್ಪಣೆ ಹಾಗೂ ನೂತನ ಅಕ್ಷೋಭ್ಯ ಅನ್ನಛತ್ರ ಉದ್ಘಾಟನೆ

Suddi Udaya
error: Content is protected !!