September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಸಕ ಹರೀಶ್ ಪೂಂಜಾರ ಮುತುವರ್ಜಿಯಿಂದ ಇಲಂತಿಲ ಪಿದಮಲೆಯಲ್ಲಿ ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ತಾತ್ಕಾಲಿಕ ಮುಕ್ತಿ

ಬೆಳ್ತಂಗಡಿ: ಕುಪ್ಪೆಟ್ಟಿ – ಉಪ್ಪಿನಂಗಡಿ ರಸ್ತೆಯ ಇಲಂತಿಲ ಗ್ರಾಮದ ಪಿದಮಲೆ ಎಂಬಲ್ಲಿ ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ಶಾಸಕ ಹರೀಶ್ ಪೂಂಜಾರವರ ಮುತುವರ್ಜಿಯಿಂದ ವೆಟ್ ಮಿಕ್ಸ್ ಹಾಕಿ ರಸ್ತೆಯ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕೆಲ ದಿನಗಳ ಹಿಂದೆ ಆಟೋ ಟೆಂಫೋ’ವೊಂದು ಇಲಂತಿಲ ಗ್ರಾಮದ ಪಿದಮಲೆ ಎಂಬಲ್ಲಿ ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ಬಿದ್ದಿದ್ದ ಘಟನೆ ನಡೆದಿತ್ತು. ಶಾಸಕ ಹರೀಶ್ ಪೂಂಜಾ’ರ ಮುತುವರ್ಜಿಯಿಂದ ರಸ್ತೆಯ ದುಸ್ಥಿತಿಯನ್ನು ಪರಿಶೀಲಿಸಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಮಳೆಯ ಪರಿಣಾಮ ಉಂಟಾಗಿದ್ದ ಪಿಡಬ್ಲ್ಯುಡಿ ರಸ್ತೆಯ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಣೆಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವೆಟ್ ಮಿಕ್ಸ್ ಹಾಕಿ ರಸ್ತೆ ಸಮತಟ್ಟುಗೊಳಿಸಲಾಗಿದೆ.

Related posts

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ

Suddi Udaya

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಕನ್ಯಾನ ಸದಾಶಿವ ಶೆಟ್ಟಿಯವರ ತೀರ್ಮಾನ ಸಂತಸ ತಂದಿದೆ: ಸಂದೀಪ್ ಶೆಟ್ಟಿ ಮಂದರ್ಸ

Suddi Udaya

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ

Suddi Udaya

ಎಸ್ ಡಿ ಎಂ ಕಾಲೇಜು ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರ

Suddi Udaya

ಸವಣಾಲು ಫಲ್ಗುಣಿ ಕುಣಿತ ಭಜನಾ ತಂಡ ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ

Suddi Udaya
error: Content is protected !!