26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಶಾಲಾರಂಭದ ಸಂಭ್ರಮ

ಉಜಿರೆ : ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಬೇಸಿಗೆ ರಜೆಯನ್ನು ಮುಗಿಸಿದ ವಿದ್ಯಾರ್ಥಿಗಳಿಗೆ 2026-27 ನೇ ಶೈಕ್ಷಣಿಕ ಸಾಲಿನ ಮೊದಲನೇ ದಿನದ ಸಂಭ್ರಮ ನಡೆಯಿತು.

ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಶಿಕ್ಷಕ ವೃಂದವು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಕಾಗದಗಳಿಂದ ಅಲಂಕರಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯ್ಕ್ ಕೆ.ಜಿ ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಶೈಕ್ಷಣಿಕ ವರ್ಷವನ್ನು ಶುಭಾರಂಭ ಮಾಡಿದರು.

ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು ಹಾಗೂ ಕಿಂಡರ್ರ್ಗಾರ್ಟನ್ ಹಾಗೂ ಒಂದನೇ ತರಗತಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆರತಿ ಬೆಳಗಿ ಶುಭಾಶಯ ಪತ್ರದೊಂದಿಗೆ ತಮ್ಮ ಶಾಲಾ ಜೀವನದ ಮೊದಲನೇ ದಿನಕ್ಕೆ ಸ್ವಾಗತಿಸಲಾಯಿತು.

Related posts

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ:

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಕುರಿತು ಐಇಸಿ ಚಟುವಟಿಕೆ

Suddi Udaya

ಗರ್ಡಾಡಿ: ಯಶ್ವಿತಾ ಭಂಡಾರಿ ಅವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಧರ್ಮಸ್ಥಳದಲ್ಲಿ ಗಾಂಧೀ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಹಾಗೂ ನವಜೀವನ ಸಾಧನಾ ಸಮಾವೇಶ

Suddi Udaya

ಕನ್ಯಾಡಿ ದೇವರಗುಡ್ಡೆ ಗುರುದೇವ ಮಠಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ:

Suddi Udaya

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯ ನವೀಕೃತ ಶಾಲಾ ಸಭಾಂಗಣ ಮತ್ತು ವಜ್ರ ಮಹೋತ್ಸವದ ಉದ್ಘಾಟನೆ

Suddi Udaya
error: Content is protected !!