26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಮಯೂರ ಆರ್ಕೇಡ್‌ನಲ್ಲಿ ಬಾಲಕೃಷ್ಣ ಶೆಟ್ಟಿ ಮಾಲಕತ್ವದ “ನೇಸರ” ಸ್ಟುಡಿಯೋ & ವೀಡಿಯೋ ಶುಭಾರಂಭ

ಗುರುವಾಯನಕೆರೆ: ಕಳೆದ ಹಲವಾರು ವರ್ಷಗಳಿಂದ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಅಪಾರ ಅನುಭವವನ್ನು ಪಡೆದುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಜನಮನ್ನಣೆಗಳಿಸಿರುವ ಛಾಯಾಗ್ರಾಹಕ ಬಾಲಕೃಷ್ಣ ಶೆಟ್ಟಿ ನೇಸರ ಅವರು ಗುರುವಾಯನಕೆರೆ ಮಯೂರ ಆರ್ಕೇಡ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ನೇಸರ ಸ್ಟುಡಿಯೋ & ವೀಡಿಯೋ' ಇದರ ಶುಭಾರಂಭವು ಮೇ 29 ರಂದು ವಿಜೃಂಭಣೆಯಿAದ ನಡೆಯಿತು.

ತಾಲೂಕಿನ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರೀ ಅವರು ನೂತನವಾಗಿ ಆರಂಭಗೊಂಡ ನೇಸರ ಸ್ಟುಡಿಯೋ ಮತ್ತು ವೀಡಿಯೋ’ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬಾಲಕೃಷ್ಣ ಶೆಟ್ಟಿಯವರು, ಕಟ್ಟೆ ಮತ್ತು ಬಳಂಜದಲ್ಲಿ ಸ್ಟುಡಿಯೋ ಮಾಡಿ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದಾರೆ. ಇದಕ್ಕೆ ಅವರು ಜನರ ಜೊತೆ ಬೆರೆತು, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಮಾಡುತ್ತಿರುವ ಸೇವೆಯೇ ಕಾರಣವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಜನಪ್ರಿಯ ವೈದ್ಯ ಡಾ.ವೇಣೂಗೋಪಾಲ್ ಶರ್ಮ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ, ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ ಮಾರುತಿ ನಿಲಯ, ಛಾಯಾಗ್ರಾಹಕ ಸಂಘದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಸುವರ್ಣ ಮಾತನಾಡಿ, ನೂತನ ಸಂಸ್ಥೆಗೆ ಶುಭ ಕೋರಿದರು.

ಸಮಾರಂಭದಲ್ಲಿ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಸತೀಶ್ ಹೆಗ್ಡೆ ಕಟ್ಟೆ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ಬೆಳ್ತಂಗಡಿ ಪೋಟೋಗ್ರಾಫರ‍್ಸ್ ಅಸೋಸಿಯೇಷನ್‌ನ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಮಾಜಿ ಅಧ್ಯಕ್ಷ ಉಮೇಶ್ ಮದ್ದಡ್ಕ, ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ಉದ್ಯಮಿ ಸಂತೋಷ್ ಕುಮಾರ್ ಮುಂಡೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹರೀಶ್, ಪ್ರಗತಿಪರ ಕೃಷಿಕ ಜಗದೀಶ್ ರೈ ಹಾನಿಂಜ, ಉದ್ಯಮಿ ರಂಜಿತ್ ಕಟ್ಟೆ, ಯಕ್ಷಗಾನ ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು, ಪ್ರಭಾಕರ ಮುದ್ದನೊಟ್ಟು, ಭರತ್ ಗುರುವಾಯನಕೆರೆ, ಗಣೇಶ್ ಬಾಬು, ವಿನೋಧ ಬಜಗೋಳಿ, ರೇವತಿ ಬಜಗೋಳಿ, ಧನಂಜಯ್ ಬಜ್ಪೆ, ನಿತೀನ್ ಕೋಟ್ಯಾನ್, ಅನಂತ್ ಭಟ್, ಶೇಖರ್ ಶೆಟ್ಟಿ ಕರ್ಮಿತ್ತಿಲ್ ಮೊದಲಾದವರು ಉಪಸ್ಥಿತರಿದ್ದರು. ಸುದ್ದಿ ಉದಯ ಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ. ಕೋಟ್ಯಾನ್ ಬಳಂಜ ಕಾರ್ಯಕ್ರಮ ನಿರ್ವಹಿಸಿದರು. ಸ್ಟುಡಿಯೋದ ಮಾಲಕ ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಅಶ್ವಿನಿ ಶೆಟ್ಟಿ, ಪುತ್ರಿ ಅಭಿಜ್ಞ ಶೆಟ್ಟಿ ಆಗಮಿಸಿದ ಅತಿಥಿ-ಗಣ್ಯರನ್ನು ಸ್ವಾಗತಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.


ತೆಂಕಕಾರಂದೂರು ಮತ್ತು ಬಳಂಜದಲ್ಲಿ ನೇಸರ ಸ್ಟುಡಿಯೋ & ವೀಡಿಯೋ ಸಂಸ್ಥೆಯನ್ನು ಹೊಂದಿ, ಗ್ರಾಹಕರಿಗೆ ಉತ್ತಮ ಸೇವೆಯನ್ನು ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ಅಶ್ವಿನಿ ಶೆಟ್ಟಿ ಪುತ್ರಿ ಅಭಿಜ್ಞ ಶೆಟ್ಟಿ ಯವರು ನೀಡುತ್ತಾ ಬರುತ್ತಿದ್ದಾರೆ. ಪಾಸ್‌ಪೋರ್ಟ್ ಸೈಜ್ ಪೋಟೋ, ಈವೆಂಟ್ ಪೋಟೋಗ್ರಾಫಿ, ವೆಡ್ಡಿಂಗ್ ಪೋಟೋಶೂಟ್, ವೀಡಿಯೋಗ್ರಾಫಿ ಇವರ ಸಂಸ್ಥೆಯಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ವಿನಂತಿಸಿಕೊಂಡಿದ್ದಾರೆ.

Related posts

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ತಣ್ಣೀರುಪಂತ: ಕುದ್ರಡ್ಕದಲ್ಲಿ ಮೂವರು ಮಕ್ಕಳಿಗೆ ಹಾವು ಕಡಿತ

Suddi Udaya

ಧರ್ಮಸ್ಥಳದಲ್ಲಿ 55ನೇ ವರ್ಷದ ಪುರಾಣ ಕಾವ್ಯ ವಾಚನ-ಪ್ರವಚನ ಉದ್ಘಾಟನೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

Suddi Udaya

ಕುಕ್ಕೇಡಿ ಗ್ರಾ.ಪಂ. ನಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya
error: Content is protected !!