September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪೀತಾಂಬರ ಹೇರಾಜೆಯವರ ಮನೆಯಲ್ಲಿ ರೋಟರಿ ಕ್ಲಬ್ ಕುಟುಂಬೋತ್ಸವ

ಬೆಳ್ತಂಗಡಿ ರೋಟರಿ ಕ್ಲಬ್ ನ ಮಾಜಿ ಸದಸ್ಯ ನಿವೃತ್ತ ಎಸ್ ಪಿ ಪೀತಾಂಬರ್ ಹೇರಾಜೆಯವರು ಬೆಳ್ತಂಗಡಿ ರೋಟರಿ ಕ್ಲಬ್ಬಿನ ಕುಟುಂಬದ ಸರ್ವ ಸದಸ್ಯರನ್ನೂ ತಮ್ಮ ಮನೆಗೆ ಆಹ್ವಾನಿಸಿ ಕುಟುಂಬೋತ್ಸವ ನಡೆಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಒಂದು ವಿಶೇಷವಾದ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತ್ತು. ಇದರ ನಿರ್ವಹಣೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ ಪ್ರಕಾಶ ಪ್ರಭು, ಪತ್ನಿ ಗೀತಾ ಪ್ರಕಾಶ ಪ್ರಭು ಹಾಗೂ ಕಾರ್ಯದರ್ಶಿ ಡಾ ಎಂ ದಯಾಕರರು ಮಾಡಿದರು. ಈ ಮನರಂಜನಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರತಾಪ ಸಿಂಹ ನಾಯಕ್ ಮತ್ತು ಜ್ಯೋತಿ ನಾಯಕ್ ದಂಪತಿಗಳು , ಡಾ ರಮೇಶ್ ಮತ್ತು ಡಾ. ಹೇಮಲತಾ ದಂಪತಿ, ಡಾ ಶ್ರೀಕೃಷ್ಣ ಮತ್ತು ಸುಮಂಗಲ ದಂಪತಿ, ಡಾ ಶಶಿಧರ ಡೋಂಗ್ರೆ ಮತ್ತು ಡಾ ಸುಷ್ಮಾ ಡೋಂಗ್ರೆ ದಂಪತಿ ಭಾಗವಹಿಸಿದ್ದರು. ಮಕ್ಕಳಿಗೆ ಸ್ಮರಣ ಶಕ್ತಿ ಸ್ಪರ್ಧೆ ಹಾಗೂ ಪ್ರೇಕ್ಷಕರಿಗೆ ವಿಶೇಷವಾದ ಕರೋಕೆ ಹಾಡು ಗುರುತಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕೀರ್ತಿಶೇಷ ಡಾ. ಬಿ ಯಶೋವರ್ಮ ಅವರ ಪತ್ನಿ ಸೋನಿಯಾ ವರ್ಮಾ ಉಪಸ್ಥಿತಿಯಲ್ಲಿ ಪೂರಣ್ ವರ್ಮ ಅವರನ್ನು ಪೀತಾಂಬರ ಹೇರಾಜೆ ದಂಪತಿ ಗೌರವಿಸಿದರು. ಈ ಆತಿಥ್ಯ ನೀಡಿದ್ದಕ್ಕಾಗಿ ಪೀತಾಂಬರ ಹೇರಾಜೆ ದಂಪತಿಯನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ ಪ್ರಕಾಶ ಪ್ರಭುಗಳು ಸ್ವಾಗತಿಸಿದರು. ಪೀತಾಂಬರ ಹೇರಾಜೆಯವರು ಮಾತನಾಡಿ, ತಮ್ಮ ಮತ್ತು ರೋಟರಿ ಕುಟುಂಬದ ಸಂಬಂಧ ಮತ್ತು ಪ್ರೀತಿಯನ್ನು ವ್ಯಕ್ತ ಪಡಿಸಿದರು ಮತ್ತು ಅಧ್ಯಕ್ಷ ಡಾ ಪ್ರಕಾಶ ಪ್ರಭುರವರನ್ನು ಸನ್ಮಾನಿಸಿದರು. ಡಾ ಎಂ ಎಂ ದಯಾಕರ್ ಧನ್ಯವಾದ ನೀಡಿದರು.

Related posts

ಕಕ್ಕಿಂಜೆಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಯಾಚನೆ

Suddi Udaya

ಇಳಂತಿಲ : ಪ್ರಶಿಕ್ಷಣ ವರ್ಗ – ಹಿಂದೂ ಸಂಗಮದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಶರೀಫ್ ಮೂಸ ಕುಂಞ ಮೃತ್ಯು

Suddi Udaya

ಅ.23 ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಕೊಕ್ಕಡ ವಲಯದ ಹಳ್ಳಿoಗೇರಿಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಮಾಜಿ ಸದಸ್ಯೆ ನಂದಾರು ನಿಧನ

Suddi Udaya
error: Content is protected !!