24.3 C
ಪುತ್ತೂರು, ಬೆಳ್ತಂಗಡಿ
June 4, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವೈಬ್ರೆಂಟ್ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ :ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆಯಿದ್ದರೆ ಜೀವನದಲ್ಲಿ ಯಶಸ್ಸು- ಡಾ. ಎಸ್.ಎನ್.ವಿ.

ಬೆಳ್ತಂಗಡಿ:ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಪ್ರಥಮ ಪಿಯುಸಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಮತ್ತು ಕಾಲೇಜಿನ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಎಸ್. ಎನ್. ವೆಂಕಟೇಶ್ ನಾಯಕ್ ರವರು ಮಾತನಾಡಿ ತಾವೆಲ್ಲರೂ ಒಂದು ಸ್ಪಷ್ಟ ಗುರಿ ಇಟ್ಟುಕೊಂಡು ವೈಬ್ರೆಂಟ್ ಕಾಲೇಜಿಗೆ ದಾಖಲಾಗಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿರುವಿರಿ. ಆದರೆ ಗುರಿ ಒಂದಿದ್ದರೆ ಸಾಲದು ತಮ್ಮ ಗುರಿಯನ್ನು ಸಾಧಿಸಲು ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆಯನ್ನು ರೂಢಿಸಿಕೊಂಡು ಕಲಿಕೆಗೆ ಹೆಚ್ಚಿನ ಒತ್ತುಕೊಟ್ಟು ನಿರಂತರ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.

ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಮಾತನಾಡಿ, ಎರಡು ವರ್ಷದ ಪಿಯುಸಿ ಶಿಕ್ಷಣವನ್ನು ನೀವೆಲ್ಲರೂ ತಪಸ್ವಿಯಂತೆ ಓದಿದರೆ ಮಾತ್ರ ಸಾಧಕರಾಗಲು ಸಾಧ್ಯವಾಗುತ್ತದೆ. ವೈಬ್ರೆಂಟ್ ಕಾಲೇಜು ಆರು ಜನ ಸಮಾನ ಮನಸ್ಕರಾದ ಶಿಕ್ಷಕರು ಕಟ್ಟಿದ ಶಿಕ್ಷಣ ಸಂಸ್ಥೆಯಾಗಿದೆ. ವೈಬ್ರೆಂಟ್ ಎಂಬುದು ಕಾಲೇಜಿಗಿರುವ ಬರಿ ಒಂದು ಹೆಸರು ಮಾತ್ರವಲ್ಲ ಸಾಧಕರನ್ನು ಸೃಷ್ಟಿಸುವ ಶಿಕ್ಷಣ ಮಂದಿರವಾಗಿದೆ.ಟ್ರಸ್ಟಿ ಡಾ. ಶರತ್ ಗೊರೆಯವರು ಪಿಯುಸಿನಲ್ಲಿ ವಿದ್ಯಾರ್ಥಿಗಳು ಎದುರಿಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ, ಸಿಇಟಿ, ನಾಟಾ, ಎನ್ ಡಿ ಎ ಪರೀಕ್ಷೆಗಳು ನಡೆಯುವ ರೀತಿ ಮತ್ತು ಅದಕ್ಕೆ ವಿದ್ಯಾರ್ಥಿಗಳು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.ಟ್ರಸ್ಟಿ ಯೋಗೇಶ್ ಬೆಡೆಕರ್ ರವರು ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ತರಗತಿಗಳಲ್ಲಿ ಮಾಡುವ ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.ಟ್ರಸ್ಟಿ ಸುಭಾಷ್ ಝಾ ಮಾತನಾಡಿ, ತಮ್ಮ ಉತ್ತಮ ಭವಿಷ್ಯಕ್ಕಾಗಿ ಎರಡು ವರ್ಷ ಕಠಿಣ ಶ್ರಮಪಡಬೇಕು. ಪ್ರತಿವಾರದ ಕೊನೆಯಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಟ್ರಸ್ಟಿ ಮೆಹಬೂಬ್ ಬಾಷಾ ರವರು ಮಾತನಾಡಿ, ನಿಮ್ಮ ಶೈಕ್ಷಣಿಕ ಮತ್ತು ವೈಯುಕ್ತಿಕ ಬೆಳವಣಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನಾವಿಲ್ಲಿ ನೀಡಲಿದ್ದೇವೆ. ವಿದ್ಯಾರ್ಥಿಗಳು ಇಲ್ಲಿರುವ ಎಲ್ಲ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಸಮಾಜದ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಲ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ನಿರೂಪಿಸಿದರೆ, ಉಪನ್ಯಾಸಕಿ ವರ್ಷ ಕಾಮತ್ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಬಂಗೇರ ವಂದನಾರ್ಪಣೆಗೈದರು.

Related posts

ಧರ್ಮಸ್ಥಳ ಬುರುಡೆ ಪ್ರಕರಣದ ಎಸ್.ಐ.ಟಿ ತನಿಖೆ:ಸತ್ಯದ ಅಗ್ನಿ ಪರೀಕ್ಷೆ ಅಗುತ್ತದೆ, ಸತ್ಯ ಹೊರಗೆ ಬರುತ್ತದೆ ಎಂದು ಕಾಯುತ್ತಿರುವ ಕ್ಷೇತ್ರದ ಭಕ್ತರು ಹಾಗೂ ಸಾರ್ವಜನಿಕರು: ಪತ್ರಿಕಾಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಆಗ್ರಹ

Suddi Udaya

ಪಟ್ರಮೆ : ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

Suddi Udaya

ಗೇರುಕಟ್ಟೆ: ಕಾರು -ಬೈಕ್ ಅಪಘಾತ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ ಸರಸ್ವತಿ ಹಿ.ಪ್ರಾ. ಶಾಲಾ ಮುಂಭಾಗದಲ್ಲಿ ಬ್ಯಾರಿಕೆಡ್ ಅಳವಡಿಕೆ

Suddi Udaya

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya
error: Content is protected !!