24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನುಗಿಡ ನೆಡುವುದರ ಮೂಲಕ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ದೇವಳ ವಿಭಾಗದ ಮುಖ್ಯಸ್ಥ ಪುರಂದರ ಭಟ್ ಮಾತನಾಡಿ ಪರಿಸರಕ್ಕೆ ನಾವು ಅನಿವಾರ್ಯವಲ್ಲ.ನಮಗೆ ಪರಿಸರ ಮುಖ್ಯ. ಪರಿಸರವನ್ನು ನಾವು ಚೆನ್ನಾಗಿ ನೋಡಿಕೊಂಡರೆ ನಾವು ಚೆನ್ನಾಗಿ ಇರುತ್ತೇವೆ. ಮನುಷ್ಯ ತನ್ನ ಅತಿ ಆಸೆಯಿಂದ ಪ್ರಕೃತಿ ನಾಶಗೊಳಿಸುತ್ತಿದ್ದಾನೆ. ಪರಿಣಾಮವಾಗಿ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಾದ ನೀವು ಪರಿಸರವನ್ನು ಪ್ರೀತಿಸಿ, ಪರಿಸರ ಪ್ರೇಮಿಗಳಾಗಿ ಬಾಳಿ ಬದುಕಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ್ ವಹಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಶೋಭಾ ಇವರು ಅತಿಥಿಗಳ ಪರಿಚಯ ಓದಿದರು.

ವೇದಿಕೆಯಲ್ಲಿ ಹಿರಿಯ ಶಿಕ್ಷಕ ಜೋಸೆಫ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕ ಶೇಖರ್ ಗೌಡ ಸ್ವಾಗತಿಸಿ, ಶಿಕ್ಷಕಿ ಕೇಶವತಿ ಕೆ ವಂದಿಸಿದರು. ಶಿಕ್ಷಕಿ ಶ್ರೀಜಾ ಎ ಕಾರ್ಯಕ್ರಮ ನಿರ್ವಹಿಸಿದರು.

Related posts

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

Suddi Udaya

ಶಿಶಿಲ : ಮುಚ್ಚಿರಡ್ಕ ಜಯಂತ್ ನಾಯ್ಕ್ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಕಳೆಂಜ: ಪರಪ್ಪುಗುತ್ತು ಪಿ.ಎನ್. ರವಿರಾಜ್ ಬಂಗ ಮತ್ತು ನಾಗರತ್ನ ದಂಪತಿಯ ವೈವಾಹಿಕ ಜೀವನದ ಸುವರ್ಣ ಮಹೋತ್ಸವ

Suddi Udaya

ಶಿಶಿಲ: ಬೈಕ್ ಮೇಲೆ ಬಿದ್ದ ಮರ: ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರು

Suddi Udaya

ಹತ್ಯಡ್ಕ: ದರ್ಭೆತಡ್ಕ ನಿವಾಸಿ ಶ್ರೀಮತಿ ಪದ್ಮಾಕ್ಷಿ ಗೋಗಟೆ ನಿಧನ

Suddi Udaya
error: Content is protected !!