ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಜ್ಯಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಬಡಗಕಾರಂದೂರು ಶಾಲೆಯ ವಿದ್ಯಾರ್ಥಿನಿ ರಮ್ಯಶ್ರೀ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ಬೆಳ್ತಂಗಡಿ: 2025-2026 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ 33 ವಿದ್ಯಾರ್ಥಿಗಳಲ್ಲಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿಯ ವಿದ್ಯಾರ್ಥಿನಿ ಕು| ರಮ್ಯಶ್ರೀ ಅತ್ಯುತ್ತಮ ಅಂಕಗಳನ್ನು ಗಳಿಸಿ ಆಯ್ಕೆ ಆಗಿರುತ್ತಾರೆ.

ಇವರು ಪಿಲ್ಯ ಗ್ರಾಮದ ಕುದ್ಯಾಡಿ ಕೋಡಿಬಾಳೆ ನಿವಾಸಿ ರಮಾನಂದ ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಪುತ್ರಿ. ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 12,000 ದಂತೆ ಮುಂದಿನ ನಾಲ್ಕು ವರ್ಷಗಳ ವರೆಗೆ ಈ ವಿದ್ಯಾರ್ಥಿವೇತನವು ದೊರೆಯಲಿದೆ. ಇವರಿಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಶಾಂತಿ ನಾಯಕ್ ಹಾಗೂ ಶ್ರೀಮತಿ ಶ್ವೇತಾ ಎಚ್ ಎನ್ ತರಬೇತಿ ನೀಡಿರುತ್ತಾರೆ.

Related posts

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ಟ್ಯೂಷನ್ ತರಬೇತಿ ಸಮಾರೋಪ

Suddi Udaya

ಉಜಿರೆ: ನಿವೃತ್ತ ಶಿಕ್ಷಕ ಕಾಶ್ಮೀರಿ ಮೆನೇಜಸ್ ನಿಧನ

Suddi Udaya

ಇಂದು(ಸೆ.2): ಶ್ರೀ ಕ್ಷೇತ್ರ ಓಡೀಲು ನಲ್ಲಿ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಕಾರ್ಯಕ್ರಮ

Suddi Udaya

ಮುಂಡಾಜೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಧರ್ಮಸ್ಥಳದಲ್ಲಿ ಸೀರೆ ವಿತರಣೆ

Suddi Udaya
error: Content is protected !!