29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ನೂತನ ಟ್ರಸ್ಟಿಗಳ ಪದಗ್ರಹಣ

ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯ ವಾರ್ಷಿಕ ಮಹಾಸಭೆಯಲ್ಲಿ 2026-2027ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾದ ನೂತನ ಟ್ರಸ್ಟಿಗಳಾದ ಜೈಸನ್ ಮ್ಯಾಲಿಲ್, ಕುರಿಯನ್ ಕಿಯಕ್ಕೆಲ್, ರಾಜೇಶ್ ತೆಕ್ಕನಾಟ್ಟ್ ಹಾಗೂ ಸೇಬಾಸ್ಟಿಯನ್ ವಲಿಯಪರಂಭಿಲ್ ಅವರು ಪದಗ್ರಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರದ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರು ನೂತನ ಟ್ರಸ್ಟಿಗಳಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಟ್ರಸ್ಟಿಗಳು ನಿಷ್ಕಾಮ ಸೇವಾ ಮನೋಭಾವದಿಂದ ಸಮಾಜಮುಖಿ ಹಾಗೂ ಜನಾನುರಾಗಿ ಕಾರ್ಯಗಳನ್ನು ಕೈಗೊಂಡು, ಪುಣ್ಯ ಕ್ಷೇತ್ರದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ಧರ್ಮ ಕೇಂದ್ರದ ಸದಸ್ಯರು ಉಪಸ್ಥಿತರಿದ್ದು, ನೂತನ ಟ್ರಸ್ಟಿಗಳಿಗೆ ಶುಭಾಶಯಗಳನ್ನು ಕೋರಿದರು.

Related posts

ಉಜಿರೆ ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಸಮಾರೋಪ

Suddi Udaya

ಡಾ|| ಹೆಗ್ಗಡೆಯವರಿಂದ ಹುಣ್ಸೆಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ಮುಂಡೂರು ಸ.ಪ್ರಾ. ಶಾಲೆಯ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ

Suddi Udaya

ಪಿಯುಸಿ ಫಲಿತಾಂಶ: ಪುಂಜಾಲಕಟ್ಟೆ ಪ.ಪೂ. ಕಾಲೇಜಿನ ಸಾತ್ವಿಗೆ 583 ಅಂಕ

Suddi Udaya

ಸೆ.16: ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya

ಬೆಳ್ತಂಗಡಿ: ಬೀದಿ ನಾಯಿಗೆ ಅಪಘಾತ: ಮಾನವೀಯತೆ ಮೆರೆದ ಡಾ. ರವಿಕುಮಾರ್

Suddi Udaya
error: Content is protected !!