25.4 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ದೇಯಿ ಬೈದೆದಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಗೆ ವಿಶ್ವದಾದ್ಯಂತ ಇರುವ ಸಮಾಜ ಬಾಂಧವರು ಕೈಜೋಡಿಸಬೇಕು: ರಾಜಶೇಖರ್ ಕೋಟ್ಯಾನ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ರವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಾಜಶೇಖರ್ ಕೋಟ್ಯಾನ್ ರವರು ಮಾತನಾಡುತ್ತಾ ಆಯುರ್ವೇದಿಕ್ ಕೇಂದ್ರದಿಂದ ಊರಿಗೆ ಹಾಗೂ ಸಮಾಜಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸುತ್ತಾ ಅದರ ಕಾಮಗಾರಿಗೆ ವಿಶ್ವದಾದ್ಯಂತ ಇರುವ ಸಮಾಜ ಬಾಂಧವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನು ಕಾರ್ಯದರ್ಶಿ ಡಾ ರಾಜಾರಾಮ್ ಕೆ ಬಿ ಸ್ವಾಗತಿಸಿ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ಲೆಕ್ಕಪತ್ರ ವನ್ನು ಮಂಡಿಸಿದರು.
ದೇಯಿ ಬೈದೆದಿ ಆಯುರ್ವೇದಿಕ್ ಕೇಂದ್ರದ ಪ್ರಗತಿಯ ಬಗ್ಗೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಸಂಕ್ಷಿಪ್ತವಾಗಿ ತಿಳಿಸಿ ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ಸ್ಪಂದಿಸಬೇಕೆಂದು ಕರೆ ನೀಡಿದರು.

ಶ್ರೀ ಕ್ಷೇತ್ರದಿಂದ ನಡೆಯುವ ಯಕ್ಷಗಾನದ ಮಾಸಿಕ ವರದಿಯನ್ನು ಮುಖ್ಯ ಸಂಚಾಲಕ ಪ್ರಮಲ್ ಕುಮಾರ್ ಕಾರ್ಕಳ ಸವಿಸ್ತಾರವಾಗಿ ತಿಳಿಸುತ್ತಾ ಲೆಕ್ಕಪತ್ರ ಮಂಡಿಸಿದರು. ಕೋಟಿ ಚೆನ್ನಯರ ಹೂವಿನ ಪೂಜೆ ಯೊಂದಿಗೆ ದರ್ಶನದ ಮುಖಾಂತರ ನಡೆಯುವ ನುಡಿಯಂತೆ ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕ್ರಮಗಳು ಕೆಲಸ ಕಾರ್ಯಗಳು ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


ಗೌರವಾಧ್ಯಕ್ಷ ಪೀತಾಂಬರ ಹೇರಾಜೆಯವರು ಸಮಯೋಚಿತ ಸಲಹೆ ಸೂಚನೆಗಳನ್ನು ನೀಡಿದರು.
ಅವಿಭಜಿತ ಜಿಲ್ಲೆಗಳ ಎಲ್ಲಾ ತಾಲೂಕಿನಲ್ಲಿ ಯಕ್ಷಗಾನದ ಬಯಲಾಟ ಸಮಿತಿಯನ್ನು ರಚಿಸಿ ಆ ಮುಖಾಂತರ ಹೆಚ್ಚೆಚ್ಚು ಯಕ್ಷಗಾನಗಳು ನಡೆಯಲು ಅವಕಾಶ ಕಲ್ಪಿಸಬೇಕೆಂದು ಮೇಳದ ಸಂಚಾಲಕ ನಿತ್ಯಾನಂದ ನಾವರ ಸಭೆಯಲ್ಲಿ ಮನವಿ ಮಾಡಿದರು.
ಗುಜರಾತಿನ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಬಿಲ್ಲವರ ಸೇವಾ ಸಂಘ ನಾಸಿಕ್ ಇದರ ಅಧ್ಯಕ್ಷ ಗಂಗಾಧರ ಅಮೀನ್, ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಗೌರವಾಧ್ಯಕ್ಷ ಎಲ್ ವಿ ಅಮೀನ್, ಮಂಗಳೂರಿನ ಉದ್ಯಮಿ ಶ್ರೀಮತಿ ಊರ್ಮಿಳ ರಮೇಶ್ ಕುಮಾರ್, ಹಾಗೂ ಪ್ರತಿಭಾ ಕುಳಾಯಿ ಯವರನ್ನು ಕ್ಷೇತ್ರದ ಗೌರವ ಮಹಾ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಗೌರವಾಧ್ಯಕ್ಷ ಜಯಂತ ನಡುಬೈಲು, ಆಡಳಿತ ಸಮಿತಿ ಸದಸ್ಯರುಗಳಾದ ಚಂದ್ರಹಾಸ ಅಮೀನ್ ಗೋವಾ, ಜಯಾನಂದ ಎಂ ಮಂಗಳೂರು, ಸುಜಿತ ವಿ ಬಂಗೇರ, ಜಯವಿಕ್ರಮ ಕಲ್ಲಾಪು, ಚಂದ್ರಶೇಖರ ಉಚ್ಚಿಲ, ನವೀನ್ ಅಮೀನ್ ಶಂಕರಪುರ ಡಾ. ಸಂತೋಷ್ ಬೈರಂಪಲ್ಲಿ, ನಾರಾಯಣ ಮಚ್ಚಿನ, ರಾಜೇಂದ್ರ ಚಿಲಿಂಬಿ, ಹಾಗೂ ಇತರರು ಹಾಜರಿದ್ದರು

Related posts

ಮುಂಡಾಜೆ: ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕು.ಮನಶ್ರೀ ಬೆಳಾಲು ರವರಿಗೆ ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಅಭಿನಂದನೆ

Suddi Udaya

ಬೆಳ್ತಂಗಡಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ರಕ್ತಪರೀಕ್ಷಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ

Suddi Udaya

ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ರೌಫ್ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ ರವೀಂದ್ರ ಶೆಟ್ಟಿ ಭೇಟಿ

Suddi Udaya

ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

Suddi Udaya
error: Content is protected !!