26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೂ.15-21: ಬೆಳ್ತಂಗಡಿಯಲ್ಲಿ ಖ್ಯಾತ ವಾಗ್ಮಿ ಡಾ. ವೀಣಾ ಬನ್ನಂಜೆಯವರಿಂದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹ

ಬೆಳ್ತಂಗಡಿ: ಬೆಳಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹ ಜೂ. 15ರಿಂದ ಜೂ.21 ರವರಗೆ ಪ್ರತಿದಿನ ಸಂಜೆ ಗಂಟೆ 6.೦೦ರಿಂದ 8.೦೦ ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯಲಿದೆ.

ಡಾ. ವೀಣಾ ಬನ್ನಂಜೆ ಅವರು ಕನ್ನಡದ ಪ್ರಸಿದ್ಧ ಲೇಖಕಿ, ಆಧ್ಯಾತ್ಮಿಕ ಚಿಂತಕಿ, ಮತ್ತು ಪ್ರಭಾವಿ ವಾಗ್ಮಿ, ಉಡುಪಿಯವರಾದ ಇವರು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪುತ್ರಿ. ಸಾಹಿತ್ಯ ಮತ್ತು ತತ್ವಶಾಸ್ತçದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಇವರು, ಧಾರ್ಮಿಕ ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದು ಇವರಿಂದ ಪ್ರವಚನ ನಡೆಯಲಿದೆ.

ಪ್ರತಿ ವರ್ಷವೂ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಸಂಪೂರ್ಣ ರಾಮಾಯಣ ಪ್ರವಚನವನ್ನು ನಡೆಯುತ್ತಿದ್ದು ನೂರಾರು ಆಸಕ್ತರು ಭಾಗವಹಿಸುತ್ತಿದ್ದರು. ರಾಮಾಯಣ ಕಥಾ ಮಾಲಿಕೆಯನ್ನು ತಿಳಿಸುವ ಉದ್ದೇಶದಿಂದ ಸಂಘಟಕರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

Related posts

ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜು ವಿದ್ಯಾರ್ಥಿ ಮಂತ್ರಿ ಮಂಡಲದ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮ ನಿಧಿ ಉಜಿರೆಯ ಉದ್ಯಮಿ, ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರಿಂದ 50 ಸಾವಿರ ದೇಣಿಗೆ ಹಸ್ತಾಂತರ

Suddi Udaya

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ-ಪವರ್‌’ಫುಲ್ ಅಧಿಕಾರಿಗಳ ಎಂಟ್ರಿ ಎಸ್ಪಿಯಾಗಿ ಅರುಣ್ ಕುಮಾ‌ರ್, ಕಮೀಷನ‌ರ್ ಆಗಿ ಸುಧೀರ್ ಕುಮಾ‌ರ್ ರೆಡ್ಡಿ

Suddi Udaya

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!