26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಾರಣಕ್ಕೆ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್ ಸ್ಥಗಿತ

ಬೆಳ್ತಂಗಡಿ: ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವ್ಯಾಪ್ತಿಯ ನೇತ್ರಾವತಿ ಪೀಕ್ ಸೇರಿದಂತೆ ನಾನಾ ಚಾರಣ ತಾಣಗಳಿಗೆ ಜೂನ್ 1ರಿಂದ ಪ್ರವೇಶಕ್ಕೆ ಅನುಮತಿ ನೀಡಿದ್ದರೂ, ಇದೀಗ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ಹೊಸ ಬುಕ್ಕಿಂಗ್‌ ಗಳು ಸ್ಥಗಿತಗೊಂಡಿದೆ.

ಕೊಡಗು ಸೇರಿದಂತೆ ರಾಜ್ಯದ ಕೆಲವೆಡೆ ಚಾರಣದ ವೇಳೆ ಸಂಭವಿಸಿದ್ದ ದುರಂತಗಳ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಚಾರಣ ಆರಂಭಕ್ಕೂ ಸುರಕ್ಷತಾ ಕ್ರಮಗಳ ಕುರಿತು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದರು. ಆದರೆ ರಾಜ್ಯದ ಕೆಲವು ಚಾರಣ ತಾಣಗಳಲ್ಲಿ ಸುತ್ತೋಲೆಯ ನಿಯಮಗಳು ಸಂಪೂರ್ಣ ಪಾಲನೆಯಾಗದಿರುವ ಹಿನ್ನೆಲೆಯಲ್ಲಿ ಐಸಿಟಿ ವಿಭಾಗವು ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರಸ್ತುತ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿಕೊಂಡಿರುವ ಚಾರಣಿಗರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

Related posts

ಕುವೆಟ್ಟು ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮ

Suddi Udaya

ಹೊಸಂಗಡಿ ವಲಯದ ಭಜನಾ ಪರಿಷತ್ ಸಭೆ

Suddi Udaya

ಕಡಿರುದ್ಯಾವರ: ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆಯ ನೀರು

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು – ಶಾಸಕರ ಶಿಫಾರಸ್ಸಿನಂತೆ ಬಸ್ಸು ಮಂಜೂರಾಗಿದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ- ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು

Suddi Udaya

ಬೆಳಾಲು : ವಿಶ್ವವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆ

Suddi Udaya

ಡಿ.7 : ಗುರುವಾಯನಕೆರೆ ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದಬಲಿ ಉತ್ಸವ

Suddi Udaya
error: Content is protected !!