26.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆದ್ರಬೆಟ್ಟು : ಶಾಲಾ ಪ್ರಾರಂಭೋತ್ಸವ ಹಾಗೂ ಶಾಲಾ ಮಂತ್ರಿಮಂಡಲದ ಉದ್ಘಾಟನೆ

ಬೆದ್ರಬೆಟ್ಟು : ಇಲ್ಲಿಯ ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ ಮತ್ತು 2026- 27ನೇ ಶೈಕ್ಷಣಿಕ ವರ್ಷವನ್ನು ಅಧಿಕೃತವಾಗಿ ಅತಿವಂದನೀಯ ಬಿಷಪ್ ಮಾರ್ ಜೇಮ್ಸ್ ಪಟೇರಿಲ್ (C.M.F)ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಶುಭ ಚಾಲನೆ ನೀಡಿದರು.

ವೇದಿಕೆಯಲ್ಲಿ ಅಧ್ಯಕ್ಷರಾಗಿ ಅತಿ ವಂದನೀಯ ಬಿಷಪ್ ಮಾರ್ ಜೇಮ್ಸ್ ಪಟೇರಿಲ್(C.M.F) ಇವರು ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟವಾದ ಗುರಿ ಹೊಂದಿರಬೇಕು ಮತ್ತು ಆ ಗುರಿ ಸಾಧನೆಗೆ ಸತತ ಪ್ರಯತ್ನ ಇರಬೇಕು ಎಂದು ಶುಭ ಹಾರೈಸಿದರು.

ಅತಿಥಿಗಳಾಗಿ ಶಾಲಾ ವ್ಯವಸ್ಥಾಪಕರಾಗಿರುವ ವಂದನೀಯ. ಫಾ.ಮ್ಯಾತ್ಯು, ವಂದನೀಯ ಫಾ| ಅಬ್ರಹಾಂ ನಾವೂರು ಚರ್ಚ್, ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಸಿಸ್ಟರ್ ಲೀನಾ, ಟ್ರಸ್ಟಿ ಸದಸ್ಯ ಫ್ರಾನ್ಸಿಸ್ ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕ ವಂದನೀಯ. ಫಾ. ಮ್ಯಾತ್ಯು ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ಆಗಮಿಸಿದ ಅತಿಥಿಗಳನ್ನು ಶಾಲಾ ಶಿಸ್ತಿನ ಪಥ ಸಂಚಲನದ ಮೂಲಕ ವಿದ್ಯಾರ್ಥಿಗಳು ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ವಂದನೀಯ ಸಿಸ್ಟರ್ ತೇಜಸ್ ಪ್ರಮಾಣ ವಚನವನ್ನು ಬೋಧಿಸಿದರು.


ಹಾಗೆಯೇ 2025- 26ನೇ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್.ಎಲ್. ಸಿ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿ.ಕೆ ಶ್ರಾವ್ಯ, ತರುಣ್, ಶಾನಿಹಾಝ್, ಚಿರಾಸ್ಮಿತ್, ಹೇಮಂತ್ ಇವರುಗಳನ್ನು ಅಭಿನಂದಿಸಲಾಯಿತು. ಬಂದಂತಹ ಅತಿಥಿಗಳನ್ನು ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಸಿಸ್ಟರ್ ಲೀನಾ ಸ್ವಾಗತಿಸಿ, ಶಾಲಾ ಸಹ ಶಿಕ್ಷಕ ಕೃಷ್ಣಪ್ಪ ಧನ್ಯವಾದವಿತ್ತರು. ಸಹಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಮಳೆಗೆ ಹಾನಿಗೊಳಗಾದ ನಾವರ ಜಾಲಪಲ್ಕೆ ದಾಮೋದರ ಪೂಜಾರಿ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya

ಪರ್ಯಾಯ ಶ್ರೀ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಜಿರೆಯಲ್ಲಿ ಪೌರ ಸನ್ಮಾನ:ಕೃಷ್ಣನ ಆರಾಧನೆಯಿಂದ ಸಂಕಷ್ಟಗಳು ದೂರ: ಶ್ರೀ ವೇದವರ್ಧನ ತೀರ್ಥ ಶ್ರೀಪಾದರು :ಹಿಂದೂ‌ ಸಮಾಜಕ್ಕೆ ಶಕ್ತಿಯಾಗಿ,ಬೆಳ್ತಂಗಡಿ ತಾಲೂಕಿನ ಜನತೆಗೆ ಸದಾ ಆಶೀರ್ವಾದವಿರಲಿ: ಶಾಸಕ ಹರೀಶ್ ಪೂಂಜ

Suddi Udaya

ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ

Suddi Udaya

ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ತಾಲೂಕು ಕುಣಿತ ಭಜನಾ ತರಬೇತಿದಾರ ಪ್ರಥಮ ಸಭೆ

Suddi Udaya

ಕಳಿಯ ಗ್ರಾ.ಪಂ. ನಿಂದ ಪ.ಜಾತಿ ಮತ್ತು ಪ.ಪಂ ಕುಟುಂಬದವರಿಗೆ ಫ್ಯಾನ್ ವಿತರಣೆ

Suddi Udaya
error: Content is protected !!