24.2 C
ಪುತ್ತೂರು, ಬೆಳ್ತಂಗಡಿ
October 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ತಂಬಾಕು ರಹಿತ ದಿನದ ಆಚರಣೆ

ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಜೂ.12 ರಂದು ವಿಶ್ವ ತಂಬಾಕು ನಿರ್ಮೂಲನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕರಾದ ಪ್ರಶಾಂತ್. ಕೆ. ಇವರು ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಹಾಗೂ ತಂಬಾಕು ಸೇವನೆಯ ದುಷ್ಪರಿಣಾಮಗಳು, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತಂಬಾಕು ವಿರೋಧಿ ಸಂದೇಶಗಳನ್ನು ಸಾರಿದರು. “ತಂಬಾಕು ಮುಕ್ತ ಸಮಾಜ ನಿರ್ಮಿಸೋಣ” ಎಂಬ ಘೋಷಣೆಯೊಂದಿಗೆ ಎಲ್ಲರೂ ತಂಬಾಕು ಸೇವಿಸದಿರಲು ಹಾಗೂ ಇತರರನ್ನೂ ಪ್ರೇರೇಪಿಸಲು ಪ್ರತಿಜ್ಞೆ ಸ್ವೀಕರಿಸಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿದರು. ತಂಬಾಕು ಮುಕ್ತ ಸಮಾಜ ನಿರ್ಮಾಣದ ಅಗತ್ಯತೆಯನ್ನು ತಿಳಿಸುವ ವಿವಿಧ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು.

Related posts

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸುಗಮ ಸಂಚಾರಕ್ಕಾಗಿ ಆರಂಭಗೊಂಡ “ಪಲ್ಲಕ್ಕಿ” ನೂತನ ಬಸ್ ಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಕೊಯ್ಯೂರು ಸ. ಪ. ಪೂ. ಕಾಲೇಜಿನಲ್ಲಿ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಶೇ. 21 ಡಿವಿಡೆಂಡ್ ಘೋಷಣೆ

Suddi Udaya

ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ವತಿಯಿಂದ ಶ್ರಮದಾನ

Suddi Udaya

ಅ.7: ಪುತ್ತೂರಿಗೆ ಶೌರ್ಯ ಜಾಗರಣ ರಥಯಾತ್ರೆ: ಹಿಂದು ಶೌರ್ಯ ಸಂಗಮ

Suddi Udaya
error: Content is protected !!