28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಥಾಮಸ್ ಕಪ್ ವಿಜೇತ ಹಾಗೂ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಯುಷ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ, ಥಾಮಸ್ ಕಪ್ ವಿಜೇತ ಹಾಗೂ ೨೦೨೬ರ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಆಯುಷ್ ಶೆಟ್ಟಿ ಅವರು ಸಕುಟುಂಬಿಕರಾಗಿ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.

ಬಳಿಕ ಅವರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇಶದ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಿರುವ ಆಯುಷ್ ಶೆಟ್ಟಿ ಅವರ ಸಾಧನೆಯನ್ನು ಶ್ಲಾಘಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಿ ದೇಶಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು.
ಪೂಜ್ಯ ಹೆಗ್ಗಡೆಯವರು ಆಯುಷ್ ಶೆಟ್ಟಿ ಅವರ ಸಾಧನೆಗೆ ಅಭಿನಂದಿಸಿ ಮುಂದೆ ಇನ್ನೂ ಹೆಚ್ಚಿನ ಯಶÀಸ್ಸು ಪಡೆಯುವಂತಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ|| ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಹಾಗೂ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಸಂತೋಷ್ ಉಪಸ್ಥಿತರಿದ್ದರು.

Related posts

ಅಪಘಾತದಲ್ಲಿ ಮೃತರಾದ ಪ್ರೈಸ್ ಮ್ಯಾಥ್ಯೂ ರವರಿಗೆ ಬೆಳ್ತಂಗಡಿಯಲ್ಲಿ ಅಂತಿಮ ನಮನ: ಅಂತ್ಯಸಂಸ್ಕಾರಕ್ಕಾಗಿ ಕೇರಳದ ಇರಟ್ಟಿಗೆ ಪಾರ್ಥಿವ ಶರೀರ ರವಾನೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಗೆ ಅಮೇರಿಕದ ಡಾ. ರಾಮಯ್ಯ ಗೌಡ, ಶ್ರೀಮತಿ ಕೋನಿ ದಂಪತಿ ಭೇಟಿ

Suddi Udaya

ಮಾ.17 : ಬೆಳ್ತಂಗಡಿ, ಧರ್ಮಸ್ಥಳ,ಕಕ್ಕಿಂಜೆ ಹಾಗೂ ವೇಣೂರು ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸೌಜನ್ಯ ಪ್ರಕರಣ: ಮರುತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya

ಪಾರೆಂಕಿ: ಪರನೀರು ನಿವಾಸಿ ಮಹಿಳೆ ನಾಪತ್ತೆ: ದೂರು ದಾಖಲು

Suddi Udaya
error: Content is protected !!