September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀರಾಮಚಂದ್ರ ದೇವರ ವಿರುದ್ಧ ಅವಹೇಳನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ : ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು

ಬೆಳ್ತಂಗಡಿ: ಹಿಂದೂ ಧರ್ಮದ ಆರಾಧ್ಯ ಮೂರ್ತಿ ಶ್ರೀರಾಮಚಂದ್ರ ದೇವರ ವಿರುದ್ಧ ಅವಹೇಳನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ತಂಗಡಿ ಮಂಡಲದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ರಾತ್ರಿ ತಮ್ಮ ಮೊಬೈಲ್‌ನಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ, ‘ವಿಸ್ತಾರ ನ್ಯೂಸ್’ ವಾಹಿನಿಯಲ್ಲಿ ಪ್ರಸಾರವಾದ ಪ್ರೊ. ಕೆ. ಎಸ್. ಭಗವಾನ್ ಅವರ ವಿವಾದಿತ ಹೇಳಿಕೆಯ ವಿಡಿಯೋವೊಂದು ಗಮನಕ್ಕೆ ಬಂದಿದೆ. ಸದ್ರಿ ವಿಡಿಯೋದಲ್ಲಿ ಪ್ರೊ. ಕೆ. ಎಸ್. ಭಗವಾನ್ ಅವರು, “ನೀವು ಪೂಜೆ ಮಾಡುವ ಶ್ರೀರಾಮಚಂದ್ರ ತಂದೆಗೆ ಹುಟ್ಟಿದವನಲ್ಲ. ಹಿಂದೂ ದೇವರುಗಳು ಕೊಲೆ ಮಾಡುವ ದೇವರುಗಳು, ರಾಮನ ತಂದೆ ದಶರಥ ಪುತ್ರಕಾಮೇಷ್ಟಿ ಪೂಜೆ ಮಾಡುತ್ತಾನೆ ಹಾಗೂ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ತ್ಯಜಿಸಿದ್ದರು” ಎಂದು ಹೇಳಿಕೆ ನೀಡಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದ್ದಾರೆ ಎಂದು ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196(1)(a) ಮತ್ತು 299 ರ ಅಡಿಯಲ್ಲಿ (ಪ್ರಕರಣ ಸಂಖ್ಯೆ: 103/2026) ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಸ್ವೀಕೃತವಾಗಿರುವ ಹೊಸ ದೂರನ್ನು ಠಾಣಾ ದೂರು ಸಂಖ್ಯೆ: PO1070260600610 ರಂತೆ ನೋಂದಾಯಿಸಿಕೊಂಡು, ಮುಂದಿನ ಸೂಕ್ತ ಕಾನೂನು ಕ್ರಮ ಹಾಗೂ ಮುಂದಿನ ತನಿಖೆಗಾಗಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಅಧಿಕೃತವಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.


ಈ ಸಂದರ್ಭದಲ್ಲಿ ಶಶಿರಾಜ್ ಶೆಟ್ಟಿ, ಜಗದೀಶ್, ಶರತ್, ಪವನ್, ಹರೀಶ್, ಸುದೀರ್, ಗಣೇಶ್, ಇನ್ನಿತರರು ಉಪಸ್ಥಿತರಿದ್ದರು.

Related posts

ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇನ್ವೆಸ್ಟಿಚರ್ ಸಮಾರಂಭ

Suddi Udaya

ಗುರುವಾಯನಕೆರೆ ಯಕ್ಷಗಾನ ನಾಟ್ಯ ತರಗತಿಗೆ ಚಾಲನೆ

Suddi Udaya

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ನೆರಿಯ : ಬೆಂಕಿ ತಗುಲಿ ಹಾನಿಯಾದ ಮನೆಗೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯಿಂದ ಭೇಟಿ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಉತ್ಸವ ಸಮಿತಿ ರಚನೆ

Suddi Udaya

ನಾಳ : ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭಾ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!