31.1 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರ: ಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವಲಯದ ಕಳಿಯ ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರದ ವತಿಯಿಂದ ಮಂಗಳೂರಿನ ಕರಾವಳಿ ಕಲಾ ತಂಡ ಕಲಾವಿದರಿಂದ ಸ್ವಚ್ಚತೆ , ನೀರಿನ ಮಿತ ಬಳಕೆ, ಮಕ್ಕಳ ಶಿಕ್ಷಣ, ಸ್ತನ ಕ್ಯಾನ್ಸರ್ ಹಾಗೂ ದುಶ್ಚಟದ ಬೀದಿ ನಾಟಕ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ಜೂ.28ರಂದು ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ನೆರವೇರಿಸಿ, ಶುಭ ಹಾರೈಸಿದರು.

ಕರಾವಳಿ ಕಲಾ ತಂಡದ ಗಿರೀಶ್ ಅವರು ಮಾಹಿತಿ ನೀಡಿದರು. ಕಳಿಯ ಬಿ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಗೌಡ ಮಾತನಾಡಿ, ಆರೋಗ್ಯ, ಸ್ವಚ್ಛತೆ ಹಾಗೂ ಮಹಿಳೆಯರ ಜಾಗೃತಿ ಕುರಿತು ಮಾತನಾಡಿದರು.

ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ ಕೆ., ಕಳಿಯ ಎ. ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸತೀಶ್, ಜ್ಞಾನ ವಿಕಾಸ ಸಂಯೋಜಕಿ ತಿಲೋತ್ತಮ, ವಲಯ ಮೇಲ್ವಿಚಾರಕ ಜಿ. ರವಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸೌಮ್ಯ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ವಂದಿಸಿದರು.

Related posts

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ಪ.ಪಂ. ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶಾಂತಿವನ ಬಳಿ ನಿಂತಿದ್ದ ಬೋಲೆರೋ ಹಾಗೂ ಬೈಕ್ ಗೆ ಕಾರು ಡಿಕ್ಕಿ

Suddi Udaya

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

Suddi Udaya
error: Content is protected !!