23.7 C
ಪುತ್ತೂರು, ಬೆಳ್ತಂಗಡಿ
October 6, 2026
Uncategorized

ಲಾಯಿಲ ಪಡ್ಲಾಡಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಮರ ಕಸ ಕಡ್ಡಿ ತೆರವು: ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ:

ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನದಿ ಸೇರಿದಂತೆ ಹಳ್ಳ , ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಲಾಯಿಲ

ಗ್ರಾಮದ ಪಡ್ಲಾಡಿ ಸಮೀಪ ಹರಿಯುತ್ತಿರುವ ಸೋಮವತಿ ಉಪನದಿಯಲ್ಲಿ ಇರುವ ಕಿಂಡಿ ಅಣೆಕಟ್ಟಿನಲ್ಲಿ ಮರ ಕಸ ಕಡ್ಡಿಗಳು ಸಿಲುಕಿ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿ ಪಕ್ಕದ ಕೃಷಿ ಪ್ರದೇಶಗಳಿಗೆ ನೀರು ನುಗ್ಗುವ ಸಂಭವ ಇದ್ದು ಈ ಬಗ್ಗೆ ಸ್ಥಳೀಯರು ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಗಮನಕ್ಕೆ ತಂದಾಗ ಅವರು ಲಾಯಿಲ ಗ್ರಾಮ ಪಂಚಾಯತ್ ಗೆ ಈ ಬಗ್ಗೆ

ಮಾಹಿತಿ ನೀಡಿ ತಕ್ಷಣ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿ ಪಂಚಾಯತ್ ವತಿಯಿಂದ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಮರ ಸೇರಿದಂತೆ ಇನ್ನಿತರ ಕಸ ಕಡ್ಡಿಗಳನ್ಬು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಪ್ರಸಾದ್ ಶೆಟ್ಟಿ ಹಾಗೂ ಪಂಚಾಯತ್ ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಕನ್ಯಾಡಿ ಬ್ರಹ್ಮಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಡಾ ಹೆಗ್ಗಡೆಯವರ ರಾಜ್ಯ ಸಭಾ ನಿದಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

Suddi Udaya

ಅರಿಕೆಗುಡ್ಡೆಯಲ್ಲಿ ನೂತನ ಸಭಾಭವನ ಉದ್ಘಾಟನೆ : ಸುಬ್ರಹ್ಮಣ್ಯ ಶ್ರೀಗಳಿಂದ ಸಭಾಭವವನ್ನು ದೀಪ ಬೆಳಗಿಸಿ , ಉದ್ಘಾಟಿಸಿ ನಾಮಫಲಕ ಅನಾವರಣ

Suddi Udaya

ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಅಣಬೆ ಕೃಷಿ ತರಬೇತಿ

Suddi Udaya
error: Content is protected !!